ಹೊಸನಗರ ತಾಲೂಕಿನಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ; ವರ್ತಕರ ಸಂಘದಿಂದ ಶಾಸಕ ಬೇಳೂರಿಗೆ ದೂರು

0 66


ಹೊಸನಗರ: ತಾಲ್ಲೂಕಿನ ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಬೃಂದಾವನ ಪ್ರವೀಣ್‌ರವರ ನೇತೃತ್ವದಲ್ಲಿ ತಾಲ್ಲೂಕಿನ ವಿದ್ಯುತ್ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ನೂತನ ಶಾಸಕ ಬೇಳೂರು ಗೋಪಾಲಕೃಷ್ಣರವರ ಸಾಗರದ ಮನೆಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ಹೊಸನಗರ-ಸಾಗರ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ಬೇಳೂರು ಗೋಪಾಲಕೃಷ್ಣರವರನ್ನು ವರ್ತಕರ ಸಂಘದ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.


ಮನವಿ ಪತ್ರದಲ್ಲಿ 400ಜೆ.ಕೆ.ಎಸ್ 6ರಿಂದ7 ತತ್‌ಕ್ಷಣ ಅಳವಡಿಸುವುದು. ನಗರ ಮಾರ್ಗವಾಗಿ ಹುಲಿಕಲ್‌ಗೆ ಹೋಗಿರುವ 33 ಕೆ.ವಿ ಲೈನನ್ನು ಹೊಸನಗರಕ್ಕೆ ತರಿಸುವುದು. 24ಗಂಟೆ ನಿರಂತರ ವಿದ್ಯುತ್ ನೀಡುವುದು ಈಗ ಇರುವ ಸಾಗರ 33 ಕೆ.ವಿ ಲೈನನ್ನು ಅತೀ ಎತ್ತರಕ್ಕೆ ಏರಿಸಿ ಟವರ್ ಲೈನ್ ಗಿಡ-ಮರಗಳು ಲೈನ್ ಮೇಲೆ ಬೀಳದಂತೆ ತಡೆಯುವುದು. 110 ಕೆ.ವಿ ಮಾರ್ಗವನ್ನು ಹೊಸನಗರಕ್ಕೆ ತಂದು ವಿದ್ಯುತ್ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸುವುದು. ಹೊಸನಗರ ತಾಲ್ಲೂಕಿಗೆ 75% ಲಿಂಗನಮಕ್ಕಿ ಯೋಜನೆಯಿಂದ ಮುಳುಗಡೆ ಹೊಂದಿ ವಿದ್ಯುತ್ ಅಭಾವದಿಂದ ಯಾವುದೇ ಅಭಿವೃದ್ಧಿ ಕಾಣದೇ ಇರುವುದರಿಂದ ಸಂಪೂರ್ಣ ಹೊಸನಗರ ತಾಲ್ಲೂಕಿಗೆ ಉಚಿತ ವಿದ್ಯುತ್ ನೀಡುವುದು ಹಾಗೂ ಮೆಸ್ಕಾ ಇಲಾಖೆಯಲ್ಲಿ ಲೈನ್‌ಮೆನ್ ಕೊರತೆಯನ್ನು ನೀಗಿಸುವುದು ಇತ್ಯಾದಿ ಬೇಡಿಕೆಗಳನ್ನು ಇಟ್ಟು ಶಾಸಕರಿಗೆ ಮನವಿ ಪತ್ರವನ್ನು ನೀಡಲಾಯಿತು.


ಸ್ಪಂದನೆ:

ಹೊಸನಗರ ತಾಲ್ಲೂಕಿನ ವರ್ತಕರ ಸಂಘದವರು ನೀಡಿರುವ ಮನವಿಯನ್ನು ಸ್ವೀಕರಿಸಿದ ನೂತನ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಕೆಲವೇ ದಿನಗಳಲ್ಲಿ ಈ ವಿದ್ಯುತ್ ಕಣ್ಣಾಮುಚ್ಚಾಲೆ ಸಮಸ್ಯೆಯನ್ನು ಬಗೆ ಹರಿಸಲು ಸೂಕ್ತ ಮಾರ್ಗೋಪಾಯಗಳನ್ನು ಹುಡುಕಲಾಗುವುದು ಎಂದು ವರ್ತಕರ ಎದರಿನಲ್ಲಿಯೇ ಇಂಧನ ಸಚಿವ ಕೆ.ಜೆ ಜಾರ್ಜ್ ಹಾಗೂ ಕೆಪಿಟಿಸಿಎಲ್ ಎಂ.ಡಿಯವರನ್ನು ದೂರವಾಣಿಯ ಮೂಲಕ ಹೊಸನಗರ ತಾಲ್ಲೂಕಿನ ಜನತೆಯ ಕಷ್ಟಗಳನ್ನು ಹೇಳಿಕೊಂಡರು. ಪರಿಹಾರ ಹುಡುಕುವುದಾಗಿ ಸಚಿವರ ಭರವಸೆಯ ಮೇಲೆ ತಕ್ಷಣ ತಾಲ್ಲೂಕಿನ ವಿದ್ಯುತ್ ಸಮಸ್ಯೆ ಬಗೆ ಹರಿಸುವುದಾಗಿ ವರ್ತಕರಿಗೆ ಭರವಸೆ ನೀಡಿದರು.


ಹೊಸನಗರ ತಾಲ್ಲೂಕಿನಲ್ಲಿ ನಿರಂತರ ವಿದ್ಯುತ್ ಸಮಸ್ಯೆಯಾಗಿದ್ದು ಇಲ್ಲಿಯವರೆಗೆ ಅನೇಕ ಶಾಸಕರು ಬಂದು ಹೋದರೂ ಈ ವಿದ್ಯುತ್ ಸಮಸ್ಯೆ ಹೊಸನಗರ ತಾಲ್ಲೂಕಿನ ಜನರಿಗೆ ಮರೀಚಿಕೆಯಾಗಿ ಉಳಿದಿದೆ ಬಂದು ಹೋದ ಎಲ್ಲ ಪಕ್ಷದ ಶಾಸಕರು ಹೊಸನಗರ ತಾಲ್ಲೂಕಿನ ಜನತೆಗೆ ಕಿವಿಯ ಮೇಲೆ ದಾಸವಾಳ ಹೂ ಇಟ್ಟವರೆ ಮಕ್ಕಳಿಗೆ ಪರೀಕ್ಷೆಯ ಸಮಯದಲ್ಲಿ, ಬೇಸಿಗೆಯಲ್ಲಿ ರೈತರು ಗಿಡ ಮರಗಳಿಗೆ ನೀರು ಬಿಡಲು ಸಾದ್ಯವಾಗದೇ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಾರ್ವಜನಿಕರು ರೈತರು ಸಣ್ಣ-ಸಣ್ಣ ಅಂಗಡಿ ಮಾಲೀಕರು ಯಾರಿಂದಲೂ ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತಿರುವ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾಗಿರುವ ಹೊಸನಗರ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಹೊಸನಗರ ತಾಲ್ಲೂಕಿನ ಜನತೆಗೆ ಆಶ್ವಾಸನೆ ನೀಡಿದ್ದು ಒಂದೆರಡು ತಿಂಗಳಲ್ಲಿ ವಿದ್ಯುತ್ ಸಮಸ್ಯಗೆ ಮುಕ್ತಿ ಹಾಡುವುದಾಗಿ ತಿಳಿಸಿದ್ದಾರೆ ಇದು ಭರವಸೆಯಾಗಿ ಉಳಿಯುತ್ತದೆಯೋ ಕಾರ್ಯರೂಪಕ್ಕೆ ಬರುತ್ತಾದೆಯೋ ಕಾದು ನೋಡಬೇಕಾಗಿದೆ.


ನೂತನ ಶಾಸಕರಿಗೆ ಮನವಿ ಪತ್ರ ನೀಡುವ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ವಿಜೇಂದ್ರ ಶೇಟ್, ಕಾರ್ಯದರ್ಶಿ ಹರೀಶ್, ಖಜಾಂಚಿ ಮಂಡಾರ ವಿಠಲ್, ದೀಪಕ್ ಸ್ವರೂಪ್, ನಿರ್ದೆಶಕರಾದ ಬೃಂದಾವನ ಪ್ರವೀಣ್ ಅಭಿಷೇಕ್, ಬಿ.ಎಸ್.ಸುರೇಶ್, ಇನ್ನೂ ಮುಂತಾದ ವರ್ತಕರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!