ಹೊಸನಗರ ತೋಟಗಾರಿಕಾ ಇಲಾಖೆಯಲ್ಲಿ ಸಪೋಟ, ಮಾವಿನ ಮರಗಳ ಮಾರಣ ಹೋಮ ;
ಪರಿಸರ ಪ್ರೇಮಿಗಳೇ ಎಲ್ಲಿದ್ದೀರಿ?

0 96


ಹೊಸನಗರ: ಸುಮಾರು 75 ವರ್ಷಗಳಿಂದ ಹೊಸನಗರ ತೋಟಗಾರಿಕೆ ಇಲಾಖೆಯಲ್ಲಿ ಸರ್ಕಾರಿ ನೌಕರರಾಗಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸಿದ್ದಾರೆ ಒಂದೊಂದು ಗಿಡಗಳನ್ನು ಮರವಾಗಿ ಬೆಳೆಸಲು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬೆವರು ಸುರಿಸಿದ್ದಾರೆ‌. ಕೆಲವರು ಜೀವಂತ ಇರಬಹುದು ಕೆಲವರು ನಿವೃತ್ತಿ ಹೊಂದಿರಬಹುದು ಆದರೆ ಗಿಡವನ್ನು ಮರವಾಗಿ ಬೆಳೆಸಲು ಶ್ರಮಿಸಿದವರು ಈಗ ಇದ್ದಿದ್ದರೇ ಅವರ ಮನಸ್ಸಿನ ನೋವು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗೊಂದು ಘಟನೆ ಹೊಸನಗರದ ತೋಟಗಾರಿಕೆ ಇಲಾಖೆಯಲ್ಲಿ ನಡೆದಿದೆ‌.


ಸುಮಾರು 25 ವರ್ಷಗಳ ಹಿಂದೆ ನೂರಾರು ಸಪೋಟ ಗಿಡ, ಮಾವಿನ ಗಿಡಗಳನ್ನು ಬೆಳೆಸಿ ಪ್ರತಿ ವರ್ಷ ಫಲ ಬರುವ ಹಣ್ಣುಗಳನ್ನು ಹರಾಜು ಮೂಲಕ ತೋಟಗಾರಿಕೆ ಇಲಾಖೆ ಬೊಕ್ಕಸಕ್ಕೆ ಹಣ ಬರುತ್ತಿತ್ತು ಆದರೆ ತೋಟಗಾರಿಕಾ ಇಲಾಖೆಯ ನೌಕರರಿಗೆ ಏಕೆ ಕಣ್ಣು ಕುಕ್ಕಿತ್ತೋ ಗೊತ್ತಿಲ್ಲ ಬೆಲೆ ಬರುವಂತಹ ಸಪೋಟ ಮತ್ತು ಮಾವಿನಮರಗಳನ್ನು ಕಡಿದು ಹಾಕಲಾಗಿದ್ದು ಪುನ್ಹಗೊಳಿಸುವ ಉದ್ದೇಶದಿಂದ ಕಡಿಯಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.


ತೋಟಗಾರಿಕೆ ಇಲಾಖೆಯ ಒಳಗೆ ಪ್ರವೇಶಿಸಿದರೆ ಮರಗಳು ಅಂಗವಿಕಲರಂತೆ ಕಾಣುವ ಜೊತೆಗೆ ಮರಗಳ ಅಳಲು ಎಂಥಹ ಹೃದಯ ಇದ್ದವರ ಮನಸ್ಸು ಚುರ್ ಎನ್ನುವಂತಾಗುತ್ತದೆ. ಅಧಿಕಾರಿಗಳಿಗೆ ಜೀವಂತ ಇರುವ ಮರಗಳನ್ನು ಕಡಿಯುವ ಮನಸ್ಸು ಹೇಗಾದರೂ ಬಂತೋ? ತಮ್ಮ ಮನೆಯಲ್ಲಿ ಬೆಳೆಸಿದ ಫಲ ಬರುವ ಮರಗಳನ್ನು ತಾವು ಕಡಿಯುತ್ತಿದ್ದೀರ ? ಎಂಬ ಪ್ರಶ್ನೆ ಅಧಿಕಾರಿ ವರ್ಗದವರಿಗೆ ಕೇಳಬೇಕೆನಿಸುತ್ತದೆ ಪುನರ್ ಚೇತನದ ಉದ್ದೇಶದಿಂದ ಕಡಿಯಬೇಕಾಗಿದೆ ಎಂದು ಹೇಳುವ ಅಧಿಕಾರಿಗಳು ಜೀವಂತ ವಿರುವ ಫಲ ನೀಡುವ ಮರಗಳನ್ನು ಕಡಿಯಲು ಯಾವ ಕಾನೂನಿನಲ್ಲಿದೆ ಎಂಬುದು ಅರ್ಥವಾಗುತ್ತಿಲ್ಲ ಫಲ ಬರುವ ಮರಗಳನ್ನು ಕಡಿದರೆ ನಿಮ್ಮ ಮನೆಯ ಮಕ್ಕಳನ್ನು ಕಡಿದಂತೆ ಎಂಬ ಹಿರಿಯರ ಮಾತು ಅಧಿಕಾರಿಗಳ ಕಿವಿಗೆ ಬಿದ್ದಂತೆ ಕಾಣುತ್ತಿಲ್ಲ ಅಧಿಕಾರಿಗಳು ವಂಶವೃಕ್ಷದ ಪಾಪದ ಫಲಗಳು ಅವರು ಮುಂದಿನ ದಿನದಲ್ಲಿ ಉಣ್ಣುತ್ತಾರೆ ಎಂದು ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿದ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಪರಿಸರ ಪ್ರೇಮಿಗಳು ಎತ್ತ ಹೋಗಿದ್ದಾರೆ?
ಪರಿಸರ ಪ್ರೇಮಿಗಳು ಪರಿಸರ ದಿನಾಚರಣೆಯ ಅಂಗವಾಗಿ ಜುಲೈ ತಿಂಗಳು ಬಂತೆಂದರೆ ರಸ್ತೆಯ ಅಕ್ಕ-ಪಕ್ಕದಲ್ಲಿ ಸರ್ಕಾರಿ ಕಛೇರಿಯ ಮುಂಭಾಗ ಗಿಡಗಳನ್ನು ನೆಟ್ಟು ಫೋಟೋ ತೆಗೆಸಿಕೊಳ್ಳುವುದು ಪತ್ರಿಕೆಗಳಲ್ಲಿ ಸುದ್ದಿ ಹಾಕಿಸಿಕೊಳ್ಳುವುದು ನಾವು ಪರಿಸರ ಪ್ರೇಮಿಗಳು ಎಂದು ಬಿಂಬಿಸಿಕೊಳ್ಳುವ ಹೊಸನಗರದ ಪರಿಸರ ಪ್ರೇಮಿಗಳು ಸುಮಾರು ನೂರಕ್ಕಿಂತ ಹೆಚ್ಚು ಬೆಲೆ ಬಾಳುವ ಫಲ ನೀಡುವ ಸಪೋಟ, ಮಾವಿನ ಗಿಡಗಳನ್ನು ಕಡಿದು ಕಡಿದು ಹಾಕಿದರೂ ಯಾರೊಬ್ಬ ಪರಿಸರ ಪ್ರೇಮಿಯು ಯಾಕೆ ಧ್ವನಿ ಎತ್ತುತ್ತಿಲ್ಲ? ಅಥವಾ ತಮ್ಮ ಗಮನಕ್ಕೆ ಬಂದಿಲ್ಲವಾ? ಬಾರದಿದ್ದರೇ ಈಗಾಲದರೂ ತೋಟಗಾರಿಕೆ ಇಲಾಖೆಗೆ ಬನ್ನಿ ಗಿಡ ಕಡಿದಿರುವುದು ಏಕೆ ? ಈ ಫಲ ಬರುವ ಮರದಿಂದ ನಿಮ್ಮ ಇಲಾಖೆಗೆ ಏನು ತೊಂದರೆಯಾಗಿದೆ ? ಎಂದು ಕೇಳಿ ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಿ. ನ್ಯಾಯಾಲಯದ ಮೊರೆ ಹೋಗಲು ಅವಕಾಶವಿದೆ ಫಲ ಬರುವ ಮರಗಳು ಭೂಮಿಯ ಮೇಲೆ ಬಿದ್ದು ಅಂಗವಿಕಲರಂತೆ ಗೋಗರೆಯುತ್ತಿದ್ದರೂ ಯಾವೊಬ್ಬ ಪರಿಸರ ಪ್ರೀಮಿಯ ಹೊಟ್ಟೆ ಉರಿಯಲಿಲ್ಲವೇ?.

ಇನ್ನಾದರೂ ಉಳಿದ ಮರಗಳನ್ನು ಜೀವಂತ ಉಳಿಸೋಣ ಪರಿಸರ ಪ್ರೇಮಿಗಳನ್ನ ಎಚ್ಚರಗೊಳಿಸೋಣ ಫಲ ಬರುವ ಮರಗಳನ್ನು ಕಡಿದ ಅಧಿಕಾರಿಗಳಿಗೆ ಶಿಕ್ಷೆ ನೀಡುವಂತೆ ಮಾಡೋಣ. ಏಳಿ ಎಚ್ಚರಗೊಳ್ಳಿ ಪರಿಸರ ಉಳಿಸಿ ಹೋರಾಟಕ್ಕೆ ಕೈಜೋಡಿಸಿ ಎಂದು ಹೇಳಬಹುದಷ್ಟೆ.

Leave A Reply

Your email address will not be published.

error: Content is protected !!