ಹೊಸನಗರ ಫ್ರೆಂಡ್ಸ್ ಟ್ರೋಫಿ – 2023 | ಸತತ 2ನೇ ಬಾರಿಗೆ ಹೊಸನಗರದಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್‌ ಪಂದ್ಯಾವಳಿ

0 82

ಹೊಸನಗರ: ತಾಲೂಕಿನಲ್ಲಿ ಸತತ ಎರಡನೇ ಬಾರಿ ಅದ್ದೂರಿ  ರಾಷ್ಟ್ರಮಟ್ಟದ ಮುಕ್ತ ಹೊನಲು ಬೆಳಕಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜನೆ ಮಾಡಿದ್ದು, ಈ ಕ್ರೀಡಾಕೂಟದಲ್ಲಿ ರಾಜ್ಯ ಹಾಗೂ ರಾಷ್ಟ ಮಟ್ಟದ ಆಟಗಾರರು ಭಾಗವಹಿಸುತ್ತಿರುವುದು ಕ್ರೀಡಾಕೂಟಕ್ಕೆ ಮತ್ತಷ್ಟು ಮೆರಗು ನೀಡಿದೆ.

ಪಂದ್ಯಾವಳಿಯು ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ನಡೆಯಲಿದ್ದು, ಪಂದ್ಯಾಟದ ನೇರ ಪ್ರಸಾರವನ್ನ ರಾಜ್ಯದ ಪ್ರಸಿದ್ಧ ಕ್ರೀಡಾ ಯೂಟ್ಯೂಬ್ ಚಾನೆಲ್ M sports ನಲ್ಲಿ ನೇರ ವೀಕ್ಷಣೆ ಮಾಡಬಹುದಾಗಿದೆ.

ಪಂದ್ಯಾವಳಿಯೂ ಫೆಬ್ರವರಿ 23 ರಿಂದ 4 ದಿನಗಳ ಕಾಲ ತಾಲೂಕಿನ ನೆಹರು ಮೈದಾನದಲ್ಲಿ ಜರುಗಲಿದ್ದು ಉದ್ಘಾಟನಾ ಪಂದ್ಯಾಟವನ್ನ ಹೊಸನಗರದ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತಿ ತೀರ್ಥ ಮಹಾಸ್ವಾಮಿಗಳು ಹಾಗೂ ಮಳಲಿ ಮಠದ ಶ್ರೀಗಳು ನೆರವೇರಿಸಲಿದ್ದಾರೆ.


ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರ:
ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ, ಕಾಂತಾರಾ ಸಿನಿಮಾದ ದೀಪಕ್ ರೈ, ಪವರ್ ಟಿವಿ ನಿರೂಪಕಿ ಮೊದಲಾದವರು ಕ್ರೀಡಾಕೂಟಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ.


ಕ್ರೀಡಾರಸಿಕರ ನೆಚ್ಚಿನ ವೀಕ್ಷಕ ವಿವರಣೆ:
ವಿಶೇಷವಾಗಿ ವೀಕ್ಷಕ ವಿವರಣೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರು ವಾಸಿಯಾದ ಪ್ರಶಾಂತ್ ಅಂಬಲಪಾಡಿ, ವಿನಯ್ ಉದ್ಯವಾರ್ ಪ್ರವೀಣ್ ಆಚಾರ್ ಅವರ ಮೋಹಕ ಮಾತಿನ ವೈಖರಿ ಕ್ರೀಡಾಕೂಟಕ್ಕೆ ಇನ್ನಷ್ಟು ಕೂತೂಹಲ ಹೆಚ್ಚಿಸಿದೆ.


ಪ್ರೇಕ್ಷಕರ ಅಚ್ಚು ಮೆಚ್ಚಿನ ಸೆಲೆಬ್ರಿಟಿ ತೀರ್ಪುಗಾರ:
ತನ್ನ ವಿಶಿಷ್ಟ ಶೈಲಿಯಿಂದ ಕ್ರೀಡಾಂಗಣ ತೀರ್ಪುಗಾರರಾಗಿ ಕ್ರಿಕೆಟ್ ರಸಿಕರ ಪ್ರೇಕ್ಷಕರ ಗಮನ ಸೆಳೆಯುವ ಮದನ್ ಮಡಿಕೇರಿ ಅವರು ಭಾಗವಹಿಸುತ್ತಿರುವುದು ಗಮನಾರ್ಹ ಸಂಗತಿ ಆಗಿದೆ. ಇವರೊಟ್ಟಿಗೆ ಪ್ರಶಾಂತ್ ಗೋಪಾಡಿ, ಭರತ್ ಶೆಟ್ಟಿ ಸಹ ಭಾಗವಹಿಸುತ್ತಿದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಹೊಸನಗರ ಬ್ರದರ್  ಎರಡನೇ ವರ್ಷ ಸಹ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜನೆ ಮಾಡಿದ್ದು  ರಾಜ್ಯ ಮಟ್ಟದ ಮುಕ್ತ ಟೆನ್ನಿಸ್ ಕ್ರಿಕೆಟ್ ಪಂದ್ಯದಲ್ಲಿ ರಾಜ್ಯದ ಅಗ್ರಗಣ್ಯ ತಂಡಗಳು ಭಾಗವಹಿಸಲಿದ್ದು ಕ್ರೀಡಾಭಿಮಾನಿಗಳು ಕ್ರಿಕೆಟ್ ಪ್ರೇಮಿಗಳು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಆಯೋಜಕರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!