ಹೊಸನಗರ : ತಾಲೂಕಿನ ಜಯನಗರದ ಸುತ್ತಾ ರಸ್ತೆಯ ಮಮತ.ಜಿ ಕೋಂ ಮಾದೇವ (23) ಇವರು ಮಾ.28 ರಂದು ಮನೆ ಬಿಟ್ಟು ಹೋಗಿರುತ್ತಾರೆ.
ಗಂಡನೊಂದಿಗೆ ಅಂದು ಬೆಳಿಗ್ಗೆ ಚಿಕ್ಕಪುಟ್ಟ ಗಲಾಟೆ ಮಾಡಿಕೊಂಡಿದ್ದ ಈಕೆ ಗಂಡ ಕೆಲಸಕ್ಕೆ ತೆರಳಿದ ಮೇಲೆ ಮನೆಯಿಂದ ಹೋಗಿರುತ್ತಾರೆಂದು ತಿಳಿದುಬಂದಿದೆ.
ಕಾಣೆಯಾದ ಮಮತ ಸುಮಾರು 5.1 ಅಡಿ ಎತ್ತರ, ದುಂಡು ಮುಖ, ಸದೃಢ ಮೈಕಟ್ಟು, ಬಿಳಿ ಮೈ ಬಣ್ಣ, 15 ಇಂಚು ಉದ್ದದ ಕೂದಲು ಇರುತ್ತದೆ. ಕಾಣೆಯಾದ ವೇಳೆ ಹಸಿರು ಬಣ್ಣದ ಚೂಡಿದಾರ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ.
ಈಕೆಯ ಸುಳಿವು ಪತ್ತೆಯಾದಲ್ಲಿ ಎಸ್‍ಪಿ ಕಚೇರಿ ಶಿವಮೊಗ್ಗ ದೂ.ಸಂ: 08182-261400, ಡಿವೈಎಸ್‍ಪಿ ತೀರ್ಥಹಳ್ಳಿ 08181-220388, ಸಿಪಿಐ ಹೊಸನಗರ 08185-221544, ಪಿಎಸ್‍ಐ ಹೊಸನಗರ 08185-221244 ನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.