ಹೊಸನಗರ : ತಾಲ್ಲೂಕಿನ ಕಳೂರು ಗ್ರಾಮದ ಚಿಕ್ಕನಕೊಪ್ಪದಲ್ಲಿ ಸಿಡಿಲು ಹೊಡೆತಕ್ಕೆ ಸುಮಾರು 25 ಅಡಿಕೆ ಮರಗಳು ಸುಟ್ಟು ಹೋಗಿರುವ ಘಟನೆ ವರದಿಯಾಗಿದೆ.
ಕಸಬಾ ಹೋಬಳಿ ಚಿಕ್ಕನಕೊಪ್ಪ ಗ್ರಾಮದ ಸೀತಮ್ಮ ಭೈರನಾಯ್ಕ ಎಂಬುವವರ ಅಡಿಕೆ ತೋಟದಲ್ಲಿ ಇತ್ತೀಚೆಗೆ ಸಿಡಿಲಿನ ರಭಸಕ್ಕೆ ಸುಮಾರು 25 ಅಡಿಕೆ ಮರಗಳು ಸುಟ್ಟು ಕರಕಲಾಗಿದ್ದು ಸುಮಾರು ಅಂದಾಜು 50 ಸಾವಿರ ರೂ. ನಷ್ಟು ನಷ್ಟ ಸಂಭವಿಸಿದೆ.
ಗ್ರಾಮ ಆಡಳಿತಾಧಿಕಾರಿ ಭೇಟಿ:
25 ಅಡಿಕೆ ಮರಗಳು ಸಿಡಿಲ ಹೊಡೆತಕ್ಕೆ ಭಸ್ಮವಾಗಿದೆ ಎಂಬ ಸುದ್ಧಿ ತಿಳಿದೊಡನೆ ಕಸಬಾ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿ ಕೌಶಿಕ್ ಹಾಗೂ ಗ್ರಾಮ ಸಹಾಯಕ ಅಶೋಕ್ ಅಡಿಕೆ ತೋಟಕ್ಕೆ ಭೇಟಿ ನೀಡಿ ವರದಿ ಸಿದ್ಧಪಡಿಸಿ ಕಂದಾಯ ಇಲಾಖೆಗೆ ಕಳುಹಿಸುವುದಾಗಿ ಹಾಗೂ ಸರ್ಕಾರದಿಂದ ಸಾಕಷ್ಟು ಪರಿಹಾರ ನೀಡುವುದಾಗಿ ತೋಟದ ಮಾಲೀಕರಿಗೆ ತಿಳಿಸಿದರು.