Ripponpet | ವಿಶ್ವದ ಅತ್ಯುನ್ನತ ಪ್ರಭಾವಿ ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 4ನೇ ಬಾರಿಗೆ ಸ್ಥಾನ ಪಡೆದ ಡಾ. ಜೆ.ಜಿ. ಮಂಜುನಾಥ

0 641

ರಿಪ್ಪನ್‌ಪೇಟೆ : ಯು.ಎಸ್.ಎ.ಯ ಸ್ಟ್ಯಾನ್ ಫೋರ್ಡ್ ವಿ.ವಿ ಮತ್ತು ಎಲ್ಸ್ವಿಯರ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಕಟಿಸಿರುವ ವಿಶ್ವದ ಅತ್ಯುನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಡಾ. ಜೆ. ಜಿ. ಮಂಜುನಾಥರವರು ಸತತ ನಾಲ್ಕನೇ ಬಾರಿ ಸ್ಥಾನ ಪಡೆದಿರುತ್ತಾರೆ.


ಮಂಗಳೂರು ವಿ.ವಿಯ ಘಟಕ ಕಾಲೇಜು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಜೆ. ಜಿ. ಮಂಜುನಾಥರವರು “ಆನಲೈಟಿಕಲ್ ಮತ್ತು ಎನರ್ಜಿ” ವಿಷಯಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿರುವ ಸಂಶೋಧನಾ ಲೇಖನಗಳ ಆಧಾರದ ಮೇಲೆ ಇವರು 2023ರ ಸಾಲಿನ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ 4509ನೇ ಸ್ಥಾನವನ್ನು ಮತ್ತು ವಿಶ್ವದ ವೃತ್ತಿ ಜೀವಮಾನ ಸಾಧಕರ ಪಟ್ಟಿಯಲ್ಲಿ 89561ನೇ ಸ್ಥಾನವನ್ನು ಪಡೆದಿರುತ್ತಾರೆ (ಸಂಯೋಜಿತ ಅಂಕಗಳ ಆಧಾರದ ಮೇಲೆ ಶ್ರೇಣಿ).


ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಸಮೀಪದ ಜಂಬಳ್ಳಿ ಗ್ರಾಮದ ಜೆ. ಶಾರದಮ್ಮ ಮತ್ತು ಗಂಗಾಧರಪ್ಪ ಗೌಡರ ಪುತ್ರರಾಗಿದ್ದಾರೆ.

ಇವರ ಈ ಸಾಧನೆಗೆ ಮಲ್ನಾಡ್ ಟೈಮ್ಸ್ ಮೀಡಿಯ ಗ್ರೂಪ್ ತುಂಬು ಹೃದಯದ ಧನ್ಯವಾದಗಳನ್ನು ಈ ಮೂಲಕ ಸಲ್ಲಿಸಿದೆ.

Leave A Reply

Your email address will not be published.

error: Content is protected !!