Ripponpet | ಹಿಂದೂ ಮಹಾಸಭಾ ಗಣಪತಿಗೆ ಪೂಜೆ ಸಲ್ಲಿಸಿದ ಹರತಾಳು ಹಾಲಪ್ಪ ಮತ್ತು ಮೂಲೆಗದ್ದೆ ಶ್ರೀಗಳು
ರಿಪ್ಪನ್‌ಪೇಟೆ: ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 56ನೇ ಗಣೇಶೋತ್ಸವ ಸಮಿತಿಯವರು ಪ್ರತಿಷ್ಟಾಪಿಸಲಾಗಿರುವ ಗಣಪತಿಗೆ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ವಿಶೇಷ ಪೂಜೆ ಸಲ್ಲಿಸಿ ಶ್ರೀ ಸ್ವಾಮಿಯ ದರ್ಶನ ಪಡೆದರು.

ಇದೇ ಸಂದರ್ಭದಲ್ಲಿ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿಯರನ್ನು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ 56ನೇ ಗಣೇಶೋತ್ಸವ ಸಮಿತಿಯವರು ಅಭಿನಂದಿಸಿದರು.
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ ಸೇನಾ ಸಮಿತಿಯ 56ನೇ ಗಣೇಶೋತ್ಸವ ಸಮಿತಿಯ ಆಧ್ಯಕ್ಷ ನಾಗರಾಜ ಪವಾರ್, ಎಂ.ಬಿ.ಮಂಜುನಾಥ, ಎಂ.ಸುರೇಶ್‌ಸಿಂಗ್, ಪಿ.ರಮೇಶ್, ವೈ.ಜೆ.ಕೃಷ್ಣ, ಈಶ್ವರಪ್ಪಗೌಡ ಗವಟೂರು, ಮೆಣಸೆ ಆನಂದ, ಸುಂದರೇಶ್, ಜಿ.ಡಿ.ಮಲ್ಲಿಕಾರ್ಜುನ, ಕೆ.ವಿ.ಲಿಂಗಪ್ಪ, ಗ್ರಾ.ಪಂ.ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಮಳಕೊಪ್ಪ ಈಶ್ವರ, ಮೀನಾಕ್ಷಮ್ಮ ಶಿವಾನಂದಪ್ಪಗೌಡ, ಅಖಿಲ ಭಾರತ ವೀರಶೈವ ಸಮಾಜದ ಮಹಿಳಾ ಘಟಕದ ತಾಲ್ಲೂಕು ಆಧ್ಯಕ್ಷೆ ಯಶೋಧ ಈಶ್ವರಪ್ಪಗೌಡ, ವೈ.ಜೆ.ಭಾಸ್ಕರ್, ಸೂರ್ಯಗೌಡ, ನವೀನ್, ನಾಗರಾಜ, ಯೋಗೀಶ್, ಎಸ್.ದಾನಪ್ಪ, ಲಕ್ಷ್ಮಣ ಬಳ್ಳಾರಿ ಇನ್ನಿತರರು ಹಾಜರಿದ್ದರು.
