ಗವಟೂರು ಶ್ರೀರಾಮೇಶ್ವರ ದೇವಸ್ಥಾನದ 14ನೇ ವರ್ಷದ ವಾರ್ಷಿಕೋತ್ಸವ, 108 ಕುಂಭಾಭಿಷೇಕ

0 35

ರಿಪ್ಪನ್‌ಪೇಟೆ : ಸಮೀಪದ ಇತಿಹಾಸ ಪ್ರಸಿದ್ದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಗುರುವಾರ ಶ್ರೀರಾಮೇಶ್ವರ ದೇವರ ಪ್ರತಿಷ್ಠಾಪನಾ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ವೇ.ಪುಟ್ಟಯ್ಯ ಎಂ ಆಲಳ್ಳಿಮಠ ಮತ್ತು ಪಂಚಾಕ್ಷರಯ್ಯ ಮಲ್ಲಾಪುರ ಇನ್ನಿತರ ಪುರೋಹಿತ ವರ್ಗದವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜಾ ಕಾರ್ಯ ನಡೆದು ಸಂಪನ್ನಗೊಂಡಿತು.


ಶ್ರೀ ರಾಮೇಶ್ವರ ದೇವರಿಗೆ 108 ಕುಂಭಾಭಿಷೇಕ ಮತ್ತು ರುದ್ರಾಭಿಷೇಕ ಆಷ್ಟೋತ್ತರ ಬಿಲ್ವಾರ್ಚನೆ ರುದ್ರಹೋಮ ಪಂಚಾಮೃತ ಅಭಿಷೇಕ ಪರಿವಾರ ದೇವರುಗಳಿಗೆ ಪೂಜೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಂತರ ಸಾಮೂಹಿಕ ಅನ್ನಸಂತರ್ಪಣೆ ಜರುಗಿತು.
19 ರಂದು ಬುಧವಾರ ಸಂಜೆ ಶ್ರೀನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ ಪೂಜೆ ಜರಗಿತು.


ಪತಿ ಹಾಲಪ್ಪ ಪರ ಪತ್ನಿಯಿಂದ ದೇವರಿಗೆ ಪೂಜೆಯೊಂದಿಗೆ ಮತಯಾಚನೆ:

ಇತಿಹಾಸ ಪ್ರಸಿದ್ದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಗುರುವಾರ ಶ್ರೀರಾಮೇಶ್ವರ ದೇವರ ಪ್ರತಿಷ್ಠಾಪನಾ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಪೂಜಾ ಮಹೋತ್ಸವದಲ್ಲಿ ಮಾಜಿ ಸಚಿವ ಶಾಸಕ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ನವರ ಪತ್ನಿ ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪತಿಯ ಗೆಲುವಿಗೆ ಪ್ರಾರ್ಥನೆ ಸಲ್ಲಿಸಿ ನೆರೆದ ಭಕ್ತರಲ್ಲಿ ಮತಯಾಚನೆ ಮಾಡಿದರು.


ಈ ಸಂದರ್ಭದಲ್ಲಿ ರಾಮೇಶ್ವರ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಗಣೇಶ್‌ರಾವ್ ಹಳಿಯೂರು, ಜಿ.ಎಂ.ದುಂಡರಾಜಗೌಡ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಗ್ರಾ.ಪಂ. ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಹಾಲಕ್ಷ್ಮಿ ಪಕ್ಷದ ಮುಖಂಡರಾದ ವಾಸಶೆಟ್ಟಿ, ಬೇಕರಿ ನಾರಾಯಣ, ಎಂ.ಸುರೇಶ್‌ಸಿಂಗ್, ಕೀರ್ತಿಗೌಡ, ಜಿ.ಡಿ.ಮಲ್ಲಿಕಾರ್ಜುನ, ಅಶ್ವಿನಿ ರವಿಶಂಕರ್ ಇನ್ನಿತರ ಹಲವು ಮುಖಂಡರು ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!