ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇಸಿಗೆ ಶಿಬಿರಗಳು ಸಹಕಾರಿ

0 33

ರಿಪ್ಪನ್‌ಪೇಟೆ: ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಗ್ರಂಥಾಲಯಗಳಲ್ಲಿ ಆದ್ಯತೆ ನೀಡಲಾಗುತ್ತಿದ್ದು ಇದರ ಸದುಪಯೋಗ ಮಾಡಿಕೊಂಡು ಪ್ರಗತಿ ಹೊಂದಬೇಕು ಎಂದು ಅಮೃತ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಮಂಜುಳಾ ರಾಘವೇಂದ್ರ ಕರೆ ನೀಡಿದರು.

ಸಮೀಪದ ಅಮೃತ ಕೆ.ಪಿ.ಎಸ್ ಶಾಲೆಯಲ್ಲಿ 9 ದಿನಗಳ “ಮಕ್ಕಳ ಬೇಸಿಗೆ ಶಿಬಿರಕ್ಕೆ’’ ಚಾಲನೆ ನೀಡಿ ಮಾತನಾಡಿ, ಮಕ್ಕಳು ಕಥೆ ಕಾದಂಬರಿ ಪುಸ್ತಕಗಳು ನಿಯತಕಾಲಕ್ಕೆಗಳನ್ನು ಓದುವುದರಿಂದ ಮಕ್ಕಳು ಸಮಾಜದಲ್ಲಿ ಉತ್ತಮ ಸಂಸ್ಕೃತಿ ಬೇಳಸಿಕೊಳ್ಳಲು ಸಾಧ್ಯವೆಂದರು.

ಸಂಪನ್ಮೂಲ ವ್ಯಕ್ತಿ ಬಿ.ಆರ್.ಸಿ.ಸತ್ಯನಾರಾಯಣ ಮಾತನಾಡಿ, ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಜ್ಞಾನಾವನ್ನು ಹೆಚ್ಚಿಸಿಕೊಳ್ಳಲು ಗ್ರಂಥಾಲಯಗಳು ಅತ್ಯಗತ್ಯವಾಗಿವೆ. ಸಾರ್ವಜನಿಕರು ಗ್ರಂಥಾಲಯಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಮಕ್ಕಳಿಗೂ ಗ್ರಂಥಾಲಯದ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಈ ಶಿಬಿರದಲ್ಲಿ ಮೂವತ್ತಕ್ಕೂ ಆಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಪಿಡಿಓ ಸುಧಾ, ಗ್ರಂಥಪಾಲಕಿ ಕಲಾವತಿ, ವಿ.ಆರ್.ಡಬ್ಲ್ಯೂ ನ ಸಾವಿತ್ರಿ, ಗ್ರಾಮ ಪಂಚಾಯ್ತಿ ಸಿಬ್ಬಂದಿವರ್ಗ ಹಾಜರಿದ್ದರು.

Leave A Reply

Your email address will not be published.

error: Content is protected !!