ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ತೊರೆಯುವುದಿಲ್ಲ ; ಬಾಳೂರು ಗ್ರಾ.ಪಂ ಮಾಜಿ ಅಧ್ಯಕ್ಷ ಹೆಚ್.ಎಸ್.ಕೃಷ್ಣಮೂರ್ತಿ | ಪ್ರತಿಷ್ಟಾವರ್ಧಂತ್ಯುತ್ಸವಕ್ಕೆ ಭಕ್ತರಿಂದ ಹೊರಕಾಣಿಕೆ ಸಮರ್ಪಣೆ

0 44


ರಿಪ್ಪನ್‌ಪೇಟೆ: ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಮುಖಂಡರು ನಮ್ಮ ಮನೆಗೆ ಭೇಟಿ ನೀಡಿ ನನ್ನನ್ನು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವಂತೆ ಒತ್ತಾಯಿಸಿದ್ದರು ಆದರೆ ನಾನು ಬಿಜೆಪಿಯ ತತ್ವಸಿದ್ದಾಂತ ಮತ್ತು ಕ್ಷೇತ್ರದ ಶಾಸಕ ಹರತಾಳು ಹಾಲಪ್ಪನವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿಕೊಳ್ಳುವುದರೊಂದಿಗೆ ಅವರ ಆಭಿಮಾನಿಯಾಗಿರುವ ನಾನು ಬಿಜೆಪಿ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂದು ಬಾಳೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಚ್.ಎಸ್.ಕೃಷ್ಣಮೂರ್ತಿಗೌಡ್ರು ಸ್ಪಷ್ಟಪಡಿಸಿದ್ದಾರೆ.


ಮಾಧ್ಯಮದವರೊಂದಿಗೆ ಮಾತನಾಡಿ, ಕೆಲವರು ನಾನು ಕಾಂಗ್ರೆಸ್ ಪಕ್ಷ ಸೇರಿದ್ದಾರೆಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆಂದು ತಿಳಿದು ನಾನು ಬಹಿರಂಗವಾಗಿಯೇ ಪಕ್ಷವನ್ನು ಬಿಡದೇ ಶಾಸಕರ ಮತ್ತು ಬಿಜೆಪಿ ಪರವಾಗಿ
ಪ್ರಚಾರದಲ್ಲಿ ತೊಡಗಿದ್ದೇನೆಂದು ಸ್ಪಷ್ಟನೆ ನೀಡಿ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಪ್ರತಿಷ್ಟಾವರ್ಧಂತ್ಯುತ್ಸವಕ್ಕೆ ಭಕ್ತರಿಂದ ಹೊರಕಾಣಿಕೆ ಸಮರ್ಪಣೆ :
ರಿಪ್ಪನ್‌ಪೇಟೆ : ಇಲ್ಲಿನ ಇತಿಹಾಸ ಪ್ರಸಿದ್ದ ವರಸಿದ್ದಿವಿನಾಯಕ ಮತ್ತು ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ 6ನೇ ವರ್ಷದ ಪ್ರತಿಷ್ಟಾ ವರ್ಧಂತ್ಯುತ್ಸವ ಮಹೋತ್ಸವಕ್ಕೆ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ಜರುಗಿತು.
ಗ್ರಾಮದಲ್ಲಿ ವ್ಯಾಪಾರಸ್ಥರು ಹೊರೆಕಾಣಿಕೆ ವಾಹನ ಬರುತ್ತಿದ್ದಂತೆ ಅಕ್ಕಿ, ಬಾಳೆಹಣ್ಣು, ದವಸ ಧಾನ್ಯವನ್ನು ನೀಡಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನ ಧರ್ಮದರ್ಶಿ ಸಮಿತಿಯ ಆಧ್ಯಕ್ಷ ಈಶ್ವರಶೆಟ್ಟಿ, ಎಂ.ಡಿ.ಇಂದಿರಮ್ಮ, ಗಣೇಶ್‌ಕಾಮತ್, ಆಶಾಸತೀಶ್, ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್,ಜಯಲಕ್ಷ್ಮಿ ಮೋಹನ್ ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಸತ್ಯನಾರಾಯಣರಾವ್, ಆರ್.ಉಮೇಶ, ಮಂಜಪ್ಪ, ಸೀತಾ, ಗೀತಾ, ಸರಸ್ವತಿ ರಾಘವೆಂದ್ರ, ಗಣೇಶ್ ಪ್ರಸಾದ್ ಇನ್ನಿತರ ದೇವಸ್ಥಾನ ಸೇವಾ ಸಮತಿಯವರು ಪಾಲ್ಗೊಂಡಿದ್ದರು.


ಕಲಾವೃದ್ಧಿ ಹೋಮ ಧಾರ್ಮಿಕ ಸಮಾರಂಭ:

ಪುರಾಣ ಪ್ರಸಿದ್ದ ಶ್ರೀಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಆನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ 6ನೇ ವರ್ಷದ ಪ್ರತಿಷ್ಠವರ್ಧಂತ್ಯುತ್ಸವ ಮತ್ತು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಏ. 14 ದಂದು ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಶಿವಮೊಗ್ಗದ ವಸಂತಭಟ್ ಇವರ ನೇತೃತ್ವದಲ್ಲಿ ಜರುಗಲಿದೆ ಎಂದು ದೇವಸ್ಥಾನ ಸೇವಾ ಸಮಿತಿಯವರು ವಿವರಿಸಿದರು.


ಸಿದ್ದಿವಿನಾಯಕ ಸ್ವಾಮಿ ಮತ್ತು ಜಗನ್ಮಾತೆ ಅನ್ನಪೂರ್ಣೇಶ್ವರಿ ಅಮ್ಮನವರ ಸನ್ನಿಧಾನದಲ್ಲಿ ಕಲಾವೃದ್ಧಿ ಹೋಮ, ಪರಿಕಲಶ ಸಹಿತ ಬ್ರಹ್ಮ ಕಲಶಾಭಿಷೇಕ ಮಹಾಪೂಜೆ ಕನಕಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ.


ಈ ಧಾರ್ಮಿಕ ಸಭಾ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ವಹಿಸಿ ಆಶೀರ್ವಚನ ನೀಡುವರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಧರ್ಮದರ್ಶಿ ಸಮಿತಿಯ ಅಧ್ಯಕ್ಷ ಆರ್.ಈ.ಈಶ್ವರಶೆಟ್ಟಿ ವಹಿಸುವರು.
ಎಂ.ಡಿ.ಇಂದ್ರಮ್ಮ, ಗಣೇಶ್ ಕಾಮತ್, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್ ಇನ್ನಿತರರು ಭಾಗವಹಿಸುವರು ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!