ಅತಿಶಯ ಮಹಾಕ್ಷೇತ್ರ ಹೊಂಬುಜದಲ್ಲಿ ವಿಜೃಂಭಣೆಯಿಂದ ಜರುಗಿದ ಜಗನ್ಮಾತೆ ಪದ್ಮಾವತಿ ಅಮ್ಮನವರ ಮಹಾರಥೋತ್ಸವ

ರಿಪ್ಪನ್‌ಪೇಟೆ: ದಿಗಂಬರ ಜೈನರ ಪವಿತ್ರ ಯಾತ್ರಾ ಕ್ಷೇತ್ರವಾದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಜಗನ್ಮಾತೆ ಪದ್ಮಾವತಿ ಅಮ್ಮನವರ ಮಹಾರಥೋತ್ಸವವು ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಮಹಾಮಾತೆ ಪದ್ಮಾವತಿ ದೇವಿಯ ಇಂದು ಅಪರಾಹ್ನ 1.25 ಗಂಟೆ ಸಮಯದಲ್ಲಿ ಮೂಲನಕ್ಷತ್ರದಲ್ಲಿ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಜಗನ್ಮಾತೆ ಪದ್ಮಾವತಿ ದೇವಿಯ ರಥದಲ್ಲಿ ವಿರಾಜಮಾನವಾಗಿ ವಿಜೃಂಭಿಸುತ್ತಿದ್ದಂತೆ ಹೊಂಬುಜ ಜೈನಮಠದ ಡಾ.ಶ್ರೀಮದ್ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮಹಾರಥೋತ್ಸವಕ್ಕೆ ವಿದ್ಯುಕ್ತವಾಗಿ ಪೂಜೆ ಸಲ್ಲಿಸಿ ಚಾಲನೆ ನೀಡುತ್ತಿದ್ದಂತೆ ನೆರೆದ ಭಕ್ತ ಸಮೂಹ ಬಾಳೆಹಣ್ಣು ಮತ್ತು ಹೂವು ರಥದತ್ತ ಎಸೆದರು. “ಶ್ರೀ ಪಾರ್ಶ್ವನಾಥ ಸ್ವಾಮಿಕೀ ಜೈ” ಶ್ರೀ ಪದ್ಮಾವತಿ ದೇವಿ ಜೈ, ಜೈನ ಧರ್ಮಕೀ ಜೈ, ಅಹಿಂಸಾ ಧರ್ಮಕೀ ಜೈ ಎಂದು ಭಕ್ತ ಸಮೂಹ ಭಕ್ತಿಭಾವಗಳೊಂದಿಗೆ ಎಂಬ ಜಯಘೋಷ ಮುಗಿಲು ಮುಟ್ಟಿತು.

ಮಹಾರಥೋತ್ಸವಕ್ಕೆ ಚಾಲನೆ ನೀಡಿದ ಶ್ರೀಗಳು ಆಶೀರ್ವಚನ ನೀಡಿ, ಲೋಕದಲ್ಲೆಲ್ಲಾ ಶಾಂತಿ ನೆಲೆಸಲು ಜೈನ ಧರ್ಮದ ಅಹಿಂಸಾ ಧರ್ಮಾಚರಣೆಯಿಂದ ಸಾಧ್ಯ ಎನ್ನುತ್ತಾ ಧರ್ಮಸಾಮರಸ್ಯದಿಂದ ಜೀವನ ಪಾವನವಾಗಲಿ ಎಂದು ಹರಸಿದರು. ಸಕಲ ಜೀವಾತ್ಮಗಳಿಗೂ ಲೇಸಯನ್ನು ಬಯಸುವ ಮೂಲಕ ಜಗತ್ತಿನಲ್ಲೆಡೆ ಅಶಾಂತಿ ಅರಾಜಕಥೆ ಎದುರಾಗದಂತೆ ಶಾಂತಿ ನೆಮ್ಮದಿಯನ್ನು ಕರುಣಿಸುವಂತಾಗಲಿ ಎಂದು ಮಾತೆ ಪದ್ಮಾವತಿ ದೇವಿಯಲ್ಲಿ ಪ್ರಾರ್ಥಿಸಿ ಮುಂದಿನ ವರ್ಷದಲ್ಲಿ ಮಳೆ ಬೆಳೆ ಸವೃದ್ದವಾಗಿ ಬೆಳೆದು ನೆಮ್ಮದಿಯ ಬದುಕು ಹಸನಾಗುವಂತಾಗಲಿ ಎಂದು ಹರಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.

ನಂತರ ಚಂಡೆ ಮತ್ತು ಕಹಳೆ ಹಾಗೂ ವಿವಿಧ ಜಾನಪದ ಕಲಾತಂಡಗಳ ಮೆರಗಿನಲ್ಲಿ ಮಠದ ಗಜರಾಜನ ಗಾಂಭೀರ್ಯ ನಡಿಗೆಯೊಂದಿಗೆ ರಥೋತ್ಸವವು ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಕಲ ಭಕ್ತ ಸಮೂಹದೊಂದಿಗೆ ರಥೋತ್ಸವವು ಬರುತ್ತಿದ್ದಂತೆ ತಳಿರು ತೋರಣದೊಂದಿಗೆ ರಂಗೋಲಿ ಹಾಕಿ ದೇವಿಯನ್ನು ಸ್ವಾಗತಿಸಿ ಹಣ್ಣು ಕಾಯಿ ಸಮರ್ಪಿಸಿದರು.

ಜಿಲ್ಲೆ ರಾಜ್ಯ ಹೊರರಾಜ್ಯದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಸಮೂಹ ಮಹಾರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನಾಶೀರ್ವಾದ ಪಡೆದರು.

ಜಾತ್ರಾ ಮಹೋತ್ಸವದಲ್ಲಿ ಮಠದಿಂದ ವಿಶೇಷ ದಾಸೋಹ ವ್ಯವಸ್ಥೆ ನೆರವೇರಿತು.
ಇದೇ ಸಂದರ್ಭದಲ್ಲಿ ಮೈಸೂರು ಅರಳಿಕಟ್ಟೆ ಕುಟುಂಬದವರು ಮತ್ತು ಸ್ನೇಹಿತರು ಶ್ರೀ ಕ್ಷೇತ್ರ ಹೊಂಬುಜ ಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವದ ಅಂಗವಾಗಿ ಭಕ್ತ ಸಮೂಹಕ್ಕೆ ಸಾಮೂಹಿಕ ಅನ್ನದಾಸೋಹ ನೆರವೇರಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,755FollowersFollow
0SubscribersSubscribe
- Advertisement -spot_img

Latest Articles

error: Content is protected !!