ರಿಪ್ಪನ್‌ಪೇಟೆ : ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್‌ಗೆ ಶೇ. 90.28 ರಷ್ಟು ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯರು ತಿಳಿಸಿದರು.
ಕಲಾ ವಿಭಾಗದಲ್ಲಿ 53 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತ್ತಿದ್ದು 48 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ 90.56 ರಷ್ಟು ಫಲಿತಾಂಶ. ವಾಣಿಜ್ಯ ವಿಭಾಗದಲ್ಲಿ 73 ವಿದ್ಯಾರ್ಥಿಗಳು ಪರಿಕ್ಷೆಗೆ ಕುಳಿತು 62 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇ. 84.93 ರಷ್ಟು, ವಿಜ್ಞಾನ ವಿಭಾಗದಲ್ಲಿ 49 ವಿದ್ಯಾರ್ಥಿಗಳಲ್ಲಿ 48 ವಿದ್ಯಾರ್ಥಿಗಳು ಉತ್ತೀರ್ಣಾರಾಗುವ ಮೂಲಕ ಶೇ. 97.28 ರಷ್ಟು ಫಲಿತಾಂಶ ಗಳಿಸುವುದರೊಂದಿಗೆ ಕಾಲೇಜ್ ಗೌರವವನ್ನು ಹೆಚ್ಚಿಸಿದ್ದಾರೆಂದು ಪ್ರಾಚಾರ್ಯರು ಮತ್ತು ಉಪನ್ಯಾಸಕ ವೃಂದ ಸಿಡಿಸಿಯವರು ಅಭಿನಂದಿಸಿದ್ದಾರೆ.