ಆಕಸ್ಮಿಕ ಅಗ್ನಿ ಅವಘಡದಿಂದ ಅಡಿಕೆ ತೋಟ, ಹುಲ್ಲಿನ ಬಣವೆ ಮತ್ತು ಲಾರಿ ಭಸ್ಮ ; ಶಾಸಕ ಹರತಾಳು ಹಾಲಪ್ಪ ಭೇಟಿ, ಸಾಂತ್ವನ

0 0


ರಿಪ್ಪನ್‌ಪೇಟೆ: ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವಾಪುರ ಗ್ರಾಮದ ನಾಗರಾಜ ಪಿ ಎಂಬುವವರ ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದ ಘಟನೆ ನಡೆದಿತ್ತು‌. ಹಾಗೇಯೆ ಸೂಡೂರು ಗ್ರಾಮದ ರಾಘವೇಂದ್ರ ಎಂಬುವರ ಹುಲ್ಲಿನ ಬಣವೆಗೆ ಹಾಗೂ ಶ್ರೀರಾಮನಗರದಲ್ಲಿ ಗ್ಯಾರೇಜ್‌ನಲ್ಲಿ ರಿಪೇರಿಗೆ ಬಂದಿದ ಲಾರಿಗೆ ಬೆಂಕಿ ತಗುಲಿ ಸಂಪೂರ್ಣ ಕರಕಲಾದ ಘಟನೆ ನಡೆದಿತ್ತು‌.


ಸಾಂತ್ವನ:

ಮಂಗಳವಾರದಂದು ನಡೆದ ಬೆಂಕಿ ಅವಘಡದ ಸ್ಥಳಕ್ಕೆ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಇಂದು ಬೆಳಗ್ಗೆ ದಿಢೀರ್ ಭೇಟಿ ನೀಡಿ ಸಾಂತ್ವನ ಹೇಳುವುದರೊಂದಿಗೆ ವಯಕ್ತಿಕ ನೆರವು ನೀಡಿದರು.

Leave A Reply

Your email address will not be published.

error: Content is protected !!