ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವಿಲ್ಲದ ಸ್ಥಿತಿ ನಿರ್ಮಾಣವಾಗಿದೆ

ರಿಪ್ಪನ್‌ಪೇಟೆ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ನಾಟಕ ರಂಗಕಲೆ ಜಾನಪದ ತತ್ವ ಪದಗಳಿಂದ ನಮ್ಮ ಕಲೆ ಸಂಸ್ಕೃತಿಗಳು ಜೀವಂತವಾಗಿ ಉಳಿದಿದ್ದು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಕ್ಕಳ ರಂಗ ಹಬ್ಬ ಪ್ರೇರಕವೆಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ದಿ.ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಠಾನ ಮತ್ತು ಮಲೆನಾಡು ಕಲಾ ತಂಡ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ‘ಹಳ್ಳಿ ಮಕ್ಕಳ ರಂಗ ಹಬ್ಬ-2023’ 15 ದಿನಗಳ ತರಬೇತಿ ಶಿಬಿರದ ಸಮಾರೋಪ ಮತ್ತು ಬಸವ ಜಯಂತಿ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಬಸವಣ್ಣನವರ ವಚನಗಳು ಮತ್ತು ಸಂತ ಶಿಶುನಾಳ ಷರೀಫ್ ಅಜ್ಜರ ಮತ್ತು ಗುರುಗೋವಿಂದ ಭಟ್ಟರ ತತ್ವ ಪದಗಳು ಇಂದಿನ ಜನಾಂಗಕ್ಕೆ ದಾರಿ ದೀಪವಾಗಿವೆ.ಅವರ ತತ್ವ ಪದಗಳಿಂದ ಮಕ್ಕಳ ಮುಂದಿನ ಬದುಕಿನ ದಿಕ್ಕು ಬದಲಿಸಿಕೊಳ್ಳಲು ಸಹಕಾರಿಯಾಗಿವೆ. ವಿದ್ಯಾಭ್ಯಾಸದೊಂದಿಗೆ ಮಕ್ಕಳಲ್ಲಿ ನಾಟಕ ರಂಗಕಲೆಗಳನ್ನು ಬೆಳೆಸುವುದರಿಂದ ಸುಸಂಸ್ಕೃತರನ್ನಾಗಿಸುವ ಮೂಲಕ ಕ್ರೀಯಾಶೀಲ ವ್ಯಕ್ತಿಯನ್ನಾಗಿಸಲು ಸಾಧ್ಯವೆಂದರು.

ಸಮಾರೋಪ ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗುಡ್ಡಪ್ಪಜೋಗಿ, ಲಕ್ಷ್ಮಿ ಎಲ್ ಹಾಗೂ ವೀರಶೈವ ಸಮಾಜದ ಮುಖಂಡ ಬೆಳಕೋಡು ಹಾಲಸ್ವಾಮಿಗೌಡರು, ಜಾನಪದ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಮುಖ ಮಂಜುನಾಥ ಕಾಮತ್, ಎಸ್.ಡಿ.ಎಂ.ಸಿ.ನಿರ್ದೇಶಕರಾದ ದಿವ್ಯಾ, ಲಕ್ಷ್ಮಿ, ಯಶಸ್ವತಿ ಜೈನ್, ಶಿಬಿರದ ನಿರ್ದೇಶಕ ಡಾ.ಗಣೇಶ್ ಕೆಂಚನಾಲ ಇನ್ನಿತರರು ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದ ಶಿವಮೊಗ್ಗ ವಿಕಾಸ ವಿದ್ಯಾಸಂಸ್ಥೆಯ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಕು|| ಅನ್ವಿತಾ ಡಿ.ಎನ್. ಹಾಗೂ ರಿಪ್ಪನ್‌ಪೇಟೆ ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿರುವ ‘ಸಮರಸ’ ಚಿತ್ರತಂಡ ನಟಿ ಅಭಿನಯ ಹಾಗೂ ಲಕ್ಷ್ಮಿಭಟ್ ಚಿತ್ರ ನಿರ್ದೇಶಕ ರಾಘವೇಂದ್ರ ಹಿರಿಯೂರು ಇವರನ್ನು ಸನ್ಮಾನಿಸಲಾಯಿತು.

ಬಸವೇಶ್ವರ ಭಾವಚಿತ್ರಕ್ಕೆ ಪುಪ್ಪಾರ್ಚಣೆ ಮೂಲಕ ಆರಂಭಗೊಂಡ ಈ ಕಾರ್ಯಕ್ರಮ ಶಿಬಿರದ ಶಿಬಿರಾರ್ಥಿಗಳು ಪ್ರದರ್ಶಿಸಿದ ವಿವಿಧ ಕಾರ್ಯಕ್ರಮಗಳು ಪ್ರೇಕ್ಷಕರ ಗಮನಸೆಳೆಯಿತು.

ಭಾವೈಕ್ಯತೆಯ ಸಂಕೇತವಾಗಿ ಹಣತೆ ಹಚ್ಚುವ ಮೂಲಕ ಕಾರ್ಯಕ್ರಮ ಸುಸಂಪನ್ನಗೊಂಡಿತು.

ಆರ್.ಡಿ.ಶೀಲಾ ಸ್ವಾಗತಿಸಿದರು. ಡಾ.ಗಣೇಶ್ ಕೆಂಚನಾಲ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,803FollowersFollow
0SubscribersSubscribe
- Advertisement -spot_img

Latest Articles

error: Content is protected !!