ಈ ಬಾರಿ ಸಾಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಿಂತ ಪ್ರೀತಿ ವಿಶ್ವಾಸದ ಗೆಲುವಿನ ವಿಶ್ವಾಸ ಎದ್ದು ಕಾಣುತ್ತಿದೆ

ರಿಪ್ಪನ್‌ಪೇಟೆ: ಈ ಹಿಂದೆ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಹರತಾಳು ಹಾಲಪ್ಪ ಸಾಗರ ಕ್ಷೇತ್ರದಲ್ಲಿ ಎದುರಾಳಿಯಾಗಿದ್ದ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪನರನ್ನು ಸೋಲಿಸಿ ಹರತಾಳು ಹಾಲಪ್ಪನವರನ್ನು ಗೆಲ್ಲಿಸಲಾಗಿತ್ತು. ಆದರೆ ಈ ಬಾರಿ ಕ್ಷೇತ್ರ ಶಾಸಕ ಹರತಾಳು ಹಾಲಪ್ಪ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಪಡಿಸಲಾದರೂ ಕೂಡಾ ಮತದಾರರ ವಿಶ್ವಾಸಗಳಿಸುವಲ್ಲಿ ವಿಫಲರಾಗಿದ್ದಾರೆಂಬ ಮತದಾರರ ಮನದಾಳದ ಮಾತಿನಂತೆ ಈ ಬಾರಿ ಪ್ರೀತಿ ವಿಶ್ವಾಸಕ್ಕೆ ಹೆಚ್ಚು ಒಲವು ವ್ಯಕ್ತವಾಗುತ್ತಿರುವುದು ನೋಡಿದರೆ ಗೋಪಾಲಕೃಷ್ಣ ಬೇಳೂರು ಗೆಲುವು ನಿಶ್ಚಿತವಾಗುವುದು ಗೋಚರಿಸುತ್ತಿದೆ.


ಮಾಜಿ ಸಚಿವ ಕಾಗೋಡು ತಿಮ್ಮನವರು ತಮ್ಮ ರಾಜಕೀಯ ಬದುಕಿನಲ್ಲಿ ಕ್ಷೇತ್ರದಲ್ಲಿನ ಅಭಿವೃದ್ದಿಗಾಗಿ ಸರ್ಕಾರದ ಮಟ್ಟದಲ್ಲಿ ಯಾವುದೇ ಇಲಾಖೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಅರಿತು ಅನುದಾನ ತರುವಲ್ಲಿ ನಿಪುಣರು ಅವರ ಹಾದಿಯಲ್ಲಿ ಹರತಾಳು ಹಾಲಪ್ಪ ಸಹ ಅಷ್ಟೆ ಚತುರರು ಆದರೆ ಮತದಾರರೆಂದರೆ ಈ ಇಬ್ಬರಿಗೂ ಒಂದು ರೀತಿಯಲ್ಲಿ ನಿರುತ್ಸಾಹ. ಹಣ ನೀಡಿದರೆ ಯಾರು ಬೇಕಾದರೂ ಓಟು ಹಾಕುತ್ತಾರೆಂಬ ಹಮ್ಮಿನಲ್ಲಿ ಇದ್ದರೆ ಈಗ ಯಾರು ದಡ್ಡರಲ್ಲ ಎಂಬ ಅರಿವು ಮೂಡುವಂತೆ ಮಾಡುವಲ್ಲಿ ಕ್ಷೇತ್ರದ ಮತದಾರರು ಪ್ರಜ್ಞಾವಂತರೆಂಬುದನ್ನು ಸಾಕಷ್ಟು ಚುನಾವಣೆಯಲ್ಲಿ ಕಂಡಿದ್ದಾರೆ.
ಈ ಬಗ್ಗೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತದಾರರ ಮನದಾಳದ ಮಾತುಗಳಲ್ಲಿ ಕೇಳಿದರೆ ಕಾಗೋಡು-ಹಾಲಪ್ಪ ಇಬ್ಬರು ಒಂದೇ ನಾವುಗಳು ಯಾರು ಹತ್ತಿರ ಹೋಗುವಂತಿಲ್ಲ ಸ್ವಾಮಿ,
ನಮಸ್ಕಾರ ಎಂದು ಕೈಮುಗಿದರೂ ಕೂಡಾ ಏನೂ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ ಅದೇ ನೋಡಿ ನಮ್ಮ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಸಾಹೇಬ್ರ ತರ ಎಲ್ಲಿಯಾದರೂ ಕಂಡರೇ ವಾಹನ ನಿಲ್ಲಿಸಿ ಕೈ ಹಿಡಿದು ಕುಟುಂಬದವರ ಮತ್ತು ಊರಿನವರ ವಿಚಾರಣೆ ನಡೆಸಿ ಪ್ರೀತಿ ವಿಶ್ವಾಸದಿಂದ ಮಾತನಾಡಿಸುವುದರೊಂದಿಗೆ ಜೇಬಿನಲ್ಲಿದ ಪುಡಿಗಾಸು ಕೊಟ್ಟು ಹೋಗುತ್ತಾರ‍್ರಿ ಅಂತವರು ನಮ್ಮ ಕ್ಷೇತ್ರದ ಶಾಸಕರಾದರೆ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಪ್ರೀತಿಯಿಂದ ನೋಡಿ ಮಾತನಾಡಿಸೋ ಗುಣ ನಮ್ಮ ಸಾಹೇಬ್ರ ಬಂಗಾರಪ್ಪಜೀಯವರಿಂದ ಬೆಳೆಸಿಕೊಂಡಿದ್ದಾರೆ. ಮೊದಲು ಜನರ ಪ್ರೀತಿ ವಿಶ್ವಾಸ ಗಳಿಸು ನಂತರ ಅಭಿವೃದ್ಧಿ ಯಾರಾದರೂ ಮಾಡಲೇಬೇಕು ಅದು ಆಗುತ್ತದೆಂಬ ಬಂಗಾರಪ್ಪ ನವರ ಸಲಹೆಯನ್ನು ಮತದಾರರ ಆಶೋತ್ತರಗಳನ್ನು ಪರಿಹರಿಸುವ ಗುಣಬೆಳೆಸಿಕೊಂಡಂತೆ, ಬೇಳೂರು ಇವರಿಗೆ ಈ ಬಾರಿ ನಮ್ಮ ಮತ ಎಂದು ಹಲವು ಗ್ರಾಮಗಳಲ್ಲಿನ ಮುಗ್ದ ಮತದಾರರು ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದು ಹೀಗೆ.


ಒಟ್ಟಾರೆಯಾಗಿ ಇದೇ ಬರುವ ಮೇ 10 ರಂದು ನಡೆಯುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಅಭಿವೃಧ್ದಿ ಕಾರ್ಯಗಳು ಕೈ ಹಿಡಿಯುತ್ತಾ ಅಥವಾ ಪ್ರೀತಿ ವಿಶ್ವಾಸಕ್ಕೆ ಗೆಲುವು ಆಗುತ್ತಾ ಕಾದು ನೋಡಬೇಕಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,802FollowersFollow
0SubscribersSubscribe
- Advertisement -spot_img

Latest Articles

error: Content is protected !!