ರಿಪ್ಪನ್‌ಪೇಟೆ : ಕೋಡೂರು ಗ್ರಾಪಂ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಏ. 08 ಮತ್ತು 09 ರಂದು ಶ್ರೀ ಪ್ರಸನ್ನ ಗಣಪತಿ ದೇವರಿಗೆ ಕಲಾಹೋಮ ಮತ್ತು ಕುಂಭಾಭಿಷೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಕಾರ್ಯಕಾರಿ ಮಂಡಳಿಯವರು ತಿಳಿಸಿದ್ದಾರೆ.
ಏ. 08 ರಂದು ಸಂಜೆ 06 ಗಂಟೆಯಿಂದ ಕಲಶ ಸ್ಥಾಪನೆ, ಏ. 09 ರಂದು ಬೆಳಗ್ಗೆ 09 ಗಂಟೆಯಿಂದ ಕೋಣಂದೂರಿನ ಅಗ್ರಹಾರದ ರಾಘವೇಂದ್ರ ಭಟ್ ಮತ್ತು ತಂಡದ ನೇತೃತ್ವದಲ್ಲಿ ಕಲಾಹೋಮ, ಕಲಸಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾತ್ರಿ 9:30 ರಿಂದ ತೀರ್ಥಹಳ್ಳಿ ತಾಲ್ಲೂಕಿನ ಸೀತೂರಿನ ಗುತ್ತಿಯಡೇಹಳ್ಳಿ ಶ್ರೀ ಗುತ್ಯಮ್ಮ ಪ್ರಸಾದಿತ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಪ್ರಸಂಗ ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕಾರಿ ಮಂಡಳಿಯ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಎ.ವಿ., ಅಧ್ಯಕ್ಷ ಶೇಖರಪ್ಪ ಹೆಚ್.ಎಲ್., ಉಪಾಧ್ಯಕ್ಷ ಮಂಜುನಾಥ ಹೆಚ್.ಜಿ., ಕಾರ್ಯದರ್ಶಿ ಗುರು ಹೆಚ್.ವೈ., ಸಹ ಕಾರ್ಯದರ್ಶಿ ವೆಂಕಟೇಶ್ ಹೆಚ್.ಹೆಚ್., ಖಜಾಂಚಿ ಶ್ರೀನಿವಾಸ ಹೆಚ್.ಜಿ. ಮತ್ತು ಸರ್ವ ಸದಸ್ಯರುಗಳಿದ್ದರು.