ಏ.1 ರಂದು ರಿಪ್ಪನ್‌ಪೇಟೆಯಲ್ಲಿ ಸಿದ್ದಗಂಗಾ ಶ್ರೀಗಳ ಜನ್ಮದಿನಾಚರಣೆ

0 4

ರಿಪ್ಪನ್‌ಪೇಟೆ: ತ್ರಿವಿಧ ದಾಸೋಹಿ ಶತಾಯುಸಿ ಕಾಯಕಯೋಗಿ ಲಿಂ.ಶ್ರೀ ಡಾ.ಶಿವಕುಮಾರ ಮಹಾಸ್ವಾಮೀಜಿಯವರ 116ನೇ ವರ್ಷದ ಜನ್ಮ ದಿನಾಚರಣೆಯನ್ನು ಏಪ್ರಿಲ್ 1 ರಂದು ಶನಿವಾರ ರಿಪ್ಪನ್‌ಪೇಟೆಯ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಭಾಭವನದಲ್ಲಿ ಸಿದ್ದಗಂಗಾಮಠದ ಶ್ರೀಗಳ ಭಕ್ತವೃಂದ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು.


ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಕೋಣಂದೂರು ಬೃಹನ್ಮಠದ ಶ್ರೀಪತಿಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಿ ಆಶಿರ್ವಚನ ನೀಡುವರು.
ಹೊಸನಗರ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಶಿವಮಣಿ ಅಕ್ಕನವರು ಪ್ರಾಸ್ತಾವಿಕವಾಗಿ ತಮ್ಮ ನುಡಿ ಸೇವೆ ಸಲ್ಲಿಸುವರು.


ಇದೇ ಸಂದರ್ಭದಲ್ಲಿ ಗ್ರಾಮೀಣ ವೈದ್ಯಕೀಯ ಸೇವೆಗಾಗಿ ಡಾ.ಟಿ.ಆರ್.ಮಂಜುನಾಥರಾವ್, ಮರಣಾನಂತರ ಅಂಗಾಂಗ ದಾನಿ ಸ್ಮರಣಾರ್ಥ ದಿ.ಆರ್ಯನ್ ಬಿ.ಜೆ.ಆಶಾ ಆರ್.ಜಗನ್ನಾಥ ಬಿ.ವೈ.ಬಸವಾಪುರ ವಿನಾಯಕ ನಗರ ಸರ್ಕಾರಿ ಶಾಲಾ ಶಿಕ್ಷಕ ಸಿ.ತಿಮ್ಮಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!