ಒತ್ತುವರಿ ಹೆಸರಿನಲ್ಲಿ ಅರಣ್ಯ ನಾಶ ; ಕಂದಾಯ, ಅರಣ್ಯ ಇಲಾಖೆಯ ನಿರ್ಲಕ್ಷ್ಯ ಆರೋಪ

0 5

ರಿಪ್ಪನ್‌ಪೇಟೆ: ಸಮೀಪದ ಬಾಳೂರು ಗ್ರಾಮ ಪಂಚಾಯತ್ ನಿರ್ಮಿಸಿದ್ದ ಅಕೇಶಿಯ ನೆಡುತೋಪು ಅರಣ್ಯವನ್ನು ಒತ್ತುವರಿ ಹೆಸರಿನಲ್ಲಿ ಖಾಸಗಿ ವ್ಯಕ್ತಿಗಳು ಈ ಜಾಗವನ್ನು ಅಕ್ರಮವಾಗಿ ಕಡಿತಲೆ ಮಾಡಿ ದಿಢೀರ್ ಶೆಡ್ ನಿರ್ಮಿಸಿರುವ ಘಟನೆ ಕುಕ್ಕಳಲೇ ಗ್ರಾಮದ ಮಜರೆ ಈಚಲುಕೊಪ್ಪದಲ್ಲಿ ನಡೆದಿದೆ.

ಕುಕ್ಕಳಲೇ ಗ್ರಾಮದ ಸರ್ವೇ ನಂಬರ್ 13 ರಲ್ಲಿ 6 ಎಕರೆ ಜಾಗದಲ್ಲಿ ಗ್ರಾಮಾಡಳಿತವು 2-12-13ನೇ ಸಾಲಿನಲ್ಲಿ ಅರಣ್ಯೀಕರಣ ಯೋಜನೆಯಲ್ಲಿ ಅಕೇಶಿಯಾ ಗಿಡಗಳನ್ನು ನೆಟ್ಟು ಪೋಷಿಸಿದೆ. 2022-23 ನೇ ಸಾಲಿನಲ್ಲಿ ಇಂಗುಗುಂಡಿ ನಿರ್ಮಾನ ಮಾಡುವುದರೊಂದಿಗೆ ಸುಮಾರು 3 ಲಕ್ಷ ರೂ. ಅನುದಾನವನ್ನು ಬಳಸಿಕೊಂಡಿದೆ. ಇದರಲ್ಲಿಯೇ ಸುಮಾರು 2 ಎಕರೆ ಜಾಗವನ್ನು ಗ್ರಾಮಸ್ಥರ ಉಪಯೋಗಕ್ಕಾಗಿ ಸ್ಮಶಾನವನ್ನಾಗಿ ಕಾಯ್ದಿರಿಸಿಕೊಳ್ಳಲಾಗಿತ್ತು. ಆದರೆ ಕುಕ್ಕಳಲೇ ಗ್ರಾಮದ ಕೆಲವು ವ್ಯಕ್ತಿಗಳು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ನೀರಿನ ಮೂಲವಿಲ್ಲದಿದ್ದರೂ ಅಡಿಕೆ ಗಿಡಗಳನ್ನು ನಡಸಲಾಗಿದೆ.

ಬೆಳೆದು ನಿಂತ ಅಕೇಶಿಯ ಮರಗಳನ್ನು ಕಡಿದು ಸುಟ್ಟು ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯವನ್ನು ಮಾಡಿದ್ದಾರೆ. ಇದರಿಂದ ಸುತ್ತಮುತ್ತಲಿನ 10-15 ಎಕರೆ ಅರಣ್ಯ ವಿರುವ ಕಂದಾಯ ಭೂಮಿಯನ್ನು ಆಕ್ರಮ ಕಬಳಿಕೆಯ ಹುನ್ನಾರ ನಡೆಸಿದ್ದು ಸಂಬಂಧಪಟ್ಟ ಕಂದಾಯ ಅರಣ್ಯ ಗ್ರಾಮಾಡಳಿತ ಅಧಿಕಾರಿಗಳು ಕೂಡಲೇ ತೆರವುಗೊಳಿಸಿ ಗ್ರಾಮಾಭಿವೃದ್ದಿಗಾಗಿ ಜಾಗವನ್ನು ಉಳಿಸುವಲ್ಲಿ ಇಲಾಖೆಯ ಅಧಿಕಾರಿಗಳು ಮುಂದಾಗುವರೇ ಕಾದು ನೋಡಬೇಕಾಗಿದೆ ಎಂದು ಕುಕ್ಕಳಲೇ ಗ್ರಾಮಸ್ಥರ ಒತ್ತಾಸೆಯಾಗಿದೆ.

ವರುಣನ ಕೃಪೆಗಾಗಿ ಮೂಲೆಗದ್ದೆ ಶ್ರೀಗಳಿಂದ ಮೌನ ಶಿವಜಪಾನುಷ್ಠಾನ ಪೂಜೆ

ರಿಪ್ಪನ್‌ಪೇಟೆ: ಶ್ರಾವಣ ಮಾಸದಲ್ಲಿ ಶಿವಪೂಜೆಯೊಂದಿಗೆ ಶಿವಮಂತ್ರ ಪಠಣ ಮಾಡುವುದರಿಂದ ಪಾಪ ದೂರವಾಗಿ ಪುಣ್ಯಪ್ರಾಪ್ತಿಯಾಗುವುದೆಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.

ಅವರು ಸಮೀಪದ ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮ ಮಠದಲ್ಲಿ “ಶ್ರಾವಣ ಮಾಸದ ಅಂಗವಾಗಿ ಆಯೋಜಿಸಲಾದ ಶಿವಪೂಜೆ’’ ಕಾರ್ಯಕ್ರಮದೊಂದಿಗೆ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದು ವರುಣನ ಕೃಫೆಗಾಗಿ ಶ್ರೀಗಳು ಮೌನಜಪಾನುಷ್ಟಾನ ಶಿವಪೂಜೆಯನ್ನು ನೆರವೇರಿಸಿದರು.
ಈ ಪೂಜಾ ಕಾರ್ಯದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ದರ್ಶನಾಶೀರ್ವಾದ ಪಡೆದರು.

Leave A Reply

Your email address will not be published.

error: Content is protected !!