ಕಾಮಗಾರಿ ಹಂತದ ಬಾವಿಗೆ ಬಿದ್ದ ಹಸು
ರಿಪ್ಪನ್‌ಪೇಟೆ: ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬರುವೆ ಗ್ರಾಮದ ಚೌಡೇಶ್ವರಿ ಬೀದಿಯಲ್ಲಿನ ಅಂಬೇಡ್ಕರ್ ಭವನದ ಬಳಿ ಉದ್ಯೋಗ ಖಾತ್ರಿ ಯೋಜನೆಯಡಿ ತೆರೆದ ಬಾವಿ ಕಾಮಗಾರಿ ಹಂತದಲ್ಲಿ ಹಸು ಬಿದ್ದು ನರಳಾಡುತ್ತಿದ್ದ ಘಟನೆ ನಡೆದಿದೆ.
ಬಾವಿಗೆ ಬಿದ್ದ ಹಸು ನರಳಾಟವನ್ನು ಕೇಳಿಸಿಕೊಂಡ ಅಕ್ಕಪಕ್ಕದವರು ತಕ್ಷಣ ಗ್ರಾಮಾಡಳಿತಕ್ಕೆ ದೂರು ನೀಡುವುದರೊಂದಿಗೆ ಭಜರಂಗದಳದ ಹೊಸನಗರ ತಾಲ್ಲೂಕು ಕಾರ್ಯದರ್ಶಿ ಕುಷನ್ ದೇವರಾಜ್ ಮತ್ತು ಲಕ್ಷ್ಮಿ ಶ್ರೀನಿವಾಸ್ ಆಚಾರ್ ಇನ್ನಿತರ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಮೂಲಕ ಹಸುವನ್ನು ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಿಡಿಓ ಮತ್ತು ಗ್ರಾಮ ಪಂಚಾಯ್ತಿ ಸಿಬ್ಬಂದಿವರ್ಗ ಭೇಟಿ ನೀಡಿ ಗುತ್ತಿಗೆದಾರನ ಬೇಜವಾಬ್ದಾರಿಯಿಂದಾಗಿ ಈ ಅನಾಹುತ ಸಂಭಸಿಸಲು ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.