ಕಾರ್ಯಕರ್ತರೊಂದಿಗೆ ಸೋಲಿನ ಪರಾಮರ್ಶೆ ಮಾಡಿದ ಮಾಜಿ ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಇತ್ತೀಚೆಗೆ ನಡೆದ ವಿಧಾನಸಭಾ ಸಾವತ್ರಿಕ ಚುನಾವಣೆಯಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ದಿ ಕಾಮಗಾರಿಗಳು ಸೇರಿದಂತೆ ಹತ್ತುಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದ್ದರೂ ಕೂಡಾ ಕ್ಷೇತ್ರದಲ್ಲಿ ಪಕ್ಷದ ಹಿನ್ನಡೆಗೆ ಕಾರಣವೇನು ಎಂಬುದರ ಕುರಿತು ಕಾರ್ಯಕರ್ತರೊಂದಿಗೆ ಮಾಜಿ ಶಾಸಕ ಹರತಾಳು ಹಾಲಪ್ಪ ಪರಾಮರ್ಶೆ ನಡೆಸಿದರು.

ರಿಪ್ಪನ್‌ಪೇಟೆ ವಿನಾಯಕ ವೃತ್ತದ ಬಳಿಯ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡಸಿ, ಮುಂದಿನ ಜಿಲ್ಲಾ ತಾಲ್ಲೂಕ್ ಪಂಚಾಯ್ತಿ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಸಂಘಟನೆ ಹಾಗೂ ಅಕಾಂಕ್ಷಿಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿ ಕಾರ್ಯಕರ್ತರು ಮತದಾರರೊಂದಿಗೆ ಇಂದಿನಿಂದಲೇ ಬಿಜೆಪಿ ಪಕ್ಷದ ಕಾರ್ಯಗಳ ಕುರಿತು ಮನವರಿಕೆ ಮಾಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮೆಣಸೆ ಆನಂದ್, ಎಂ.ಸುರೇಶ್‌ಸಿಂಗ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಜಿ.ಪಂ.ಮಾಜಿ ಸದಸ್ಯೆ ಎ.ಟಿ.ನಾಗರತ್ನ ನಾಗರಾಜ್, ಪಕ್ಷದ ಮುಖಂಡರಾದ ಎನ್.ಸತೀಶ್, ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ತರಕಾರಿ ಯೋಗೇಂದ್ರಗೌಡ, ಪಿ.ರಮೆಶ್, ಪರಮೇಶ ಹೊನ್ನಕೊಪ್ಪ, ಮಹೇಶ್, ಸಾಜಿ, ರಾಮಚಂದ್ರ, ಉದ್ಯಮಿ ಎಲ್.ನಾಗರಾಜ್ ಶೆಟ್ಟಿ, ಸುಂದರೇಶ್ ಇನ್ನಿತರರು ಹಾಜರಿದ್ದರು.

ಅಪಘಾತದಲ್ಲಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿ ವೈಯಕ್ತಿಕ ನೆರವು ನೀಡಿದ ಮಾಜಿ ಸಚಿವ ಹರತಾಳು

ರಿಪ್ಪನ್‌ಪೇಟೆ: ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಾಣಬೈಲು ಯೋಮಕೇಶ್ ಪತ್ನಿ ಮತ್ತು ಸಿದ್ದಪ್ಪವನರ ಪತ್ನಿ ಹಾಗೂ ರಿಪ್ಪನ್‌ಪೇಟೆ ಗವಟೂರು ಗ್ರಾಮದ ಹೃದಯಾಘಾತಕ್ಕೆ ಒಳಗಾದ ಪಿ.ಸುಧೀಂದ್ರರ ಮನೆಗೆ ಕ್ಷೇತ್ರದ ಮಾಜಿ ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಆರೋಗ್ಯದ ಸ್ಥಿತಿಯನ್ನು ವಿಚಾರಣೆ ನಡೆಸಿ ವೈಯಕ್ತಿಕ ನೆರವು ನೀಡಿ ಬೇಗ ಗುಣಮುಖ ಹೊಂದಲೆಂದು ಹಾರೈಸಿದರು.


ಈ ಸಂದರ್ಭದಲ್ಲಿ ಬೆಳ್ಳೂರು ಗ್ರಾ.ಪಂ.ಮಾ.ಉ.ಬುಕ್ಕಿವರೆ ರಾಜೇಶ್, ಉದ್ಯಮಿ ನಾಗರಾಜ್‌ಶೆಟ್ಟಿ ಇನ್ನಿತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,792FollowersFollow
0SubscribersSubscribe
- Advertisement -spot_img

Latest Articles

error: Content is protected !!