ಕ್ರೀಡಾಕೂಟ ; ರಾಜ್ಯ ಮಟ್ಟಕ್ಕೆ ಆಯ್ಕೆ

0 464

ರಿಪ್ಪನ್‌ಪೇಟೆ : ನ. 05 ರಿಂದ 07ರ ವರೆಗೆ ಕೋಲಾರದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಶಾರದಾ, ರಾಮಕೃಷ್ಣ ವಿದ್ಯಾಲಯ ರಿಪ್ಪನ್‌ಪೇಟೆಯ 12 ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯನ್ನು ಪ್ರತಿನಿಧಿಸಿದ್ದು 14 ವರ್ಷ ಹಾಗೂ 17 ವರ್ಷ ವಯೋಮಿತಿಯೊಳಗಿನ ಕಬಡ್ಡಿ ಪಂದ್ಯಾವಳಿಯಲ್ಲಿ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಜ್ಞಾನ, ಶ್ರಾವ್ಯ, ಐಶ್ವರ್ಯ, ದೀಕ್ಷಾ ಮತ್ತು ಸಂಜನ. 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಶ್ರೇಯ ಬಿ ಆರ್, ಶಮಿತಾ, ನಿಶ್ಚಿತ, ಅನುಷ್ಕಾ ಮತ್ತು ಸೋನಾಲಿ ಈ ಎಲ್ಲಾ 10 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅನೀಶ್ ಮತ್ತು ಶ್ರೇಷ್ಠ ಈ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.


ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಕರಾದ ವಿನಯ್ ಇವರಿಗೆ ಹಾಗೂ ತಂಡದ ವ್ಯವಸ್ಥಾಪಕಿ ಶ್ಯಾಮಲಾ ಹಾಗೂ ತರಬೇತಿ ನೀಡಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.
ರಾಮಕೃಷ್ಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಿ.ಎಂ ದೇವರಾಜ್, ಮುಖ್ಯ ಶಿಕ್ಷಕ ರವಿ ಹಾಗೂ ವ್ಯವಸ್ಥಾಪಕ ಸಂದೇಶ್, ಹಿರಿಯ ಶಿಕ್ಷಕ ಗುರುರಾಜ್ ಹಾಗೂ ಸಂಸ್ಥೆಯ ಎಲ್ಲ ಶಿಕ್ಷಕರು ಹಾಗೂ ಎಲ್ಲಾ ಪೋಷಕರು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!