ಗುಡ್‌ಶಫರ್ಡ್ ಚರ್ಚ್‌ನ ಧರ್ಮಗುರುಗಳ ದರ್ಶನಾಶೀರ್ವಾದ ಪಡೆದ ಬೇಳೂರು

0 64

ರಿಪ್ಪನ್‌ಪೇಟೆ: ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಸಂಕಷ್ಟಗಳು ಎದುರಾಗದಂತೆ ದೇವಸ್ಥಾನ, ಚರ್ಚ್, ಮಠ ಮಂದಿರ ಹೀಗೆ ತೆರಳಿ ಅಲ್ಲಿನ ದೇವರ ಮತ್ತು ಧರ್ಮಗುರುಗಳ ದರ್ಶನಾಶೀರ್ವಾದ ಪಡೆಯುವುದು ಇತ್ತೀಚಿನ ದಿನಗಳಲ್ಲಿ ಕಾಣಬಹುದಾಗಿದ್ದು ಅದರಂತೆ ಇಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ರಿಪ್ಪನ್‌ಪೇಟೆಯ ಗುಡ್‌ಶಫರ್ಡ್ ಕ್ರಿಶ್ಚಿಯನ್ ಚರ್ಚ್‌ನ ಧರ್ಮಗುರುಗಳನ್ನು ಭೇಟಿ ಮಾಡಿ ದರ್ಶನಾಶೀರ್ವಾದ ಪಡೆದರು.

ಕ್ರಿಶ್ಚಿಯನ್ ಧರ್ಮಗುರುಗಳು ಆಭ್ಯರ್ಥಿ ಗೋಪಾಲಕೃಷ್ಣರವರಿಗೆ ಶುಭಹಾರೈಸಿ ತಾವು ಜನರ ಸಂಕಷ್ಟವನ್ನು ಪರಿಹರಿಸುವ ಮೂಲಕ ಮತದಾರರಲ್ಲಿ ಪ್ರೀತಿ ವಿಶ್ವಾಸಗಳಿಸಿ ನಿಮಗೆ ಮುಂದೆ ಒಳ್ಳಯ ಭವಿಷ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಸಾಗರ-ಹೊಸನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ನನ್ನದೇ ಗೆಲುವು ಎಂಬ ವಾತಾವರಣ ಸೃಷ್ಟಿಯಾಗಿದೆ
ನಮ್ಮ ಪಕ್ಷದ ಗ್ಯಾರಂಟಿ ಕಾರ್ಡ್‌ಗಳು ಈಗಾಗಲೇ ಮನೆಮನಸ್ಸು ತಲುಪಿ ಈ ಐದು ಪ್ರಣಾಳಿಕೆಗಳು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿದ್ದು ಹಣ ಈ ಬಾರಿ ಚಲಾವಣೆಯಾಗದೇ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು ಹೇಳಿದಂತೆ ಹಣಪಡೆದು ಮತವನ್ನು ಒಳ್ಳೆಯ ವ್ಯಕ್ತಿಗೆ ಚಲಾಯಿಸಿ ಎಂದಿರುವುದು ನನ್ನ ಗೆಲುವಿಗೆ ಶಕ್ತಿ ಬಂದಂತಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ತಾಲ್ಲೂಕ್ ಪ್ರಚಾರ ಸಮಿತಿ ಅಧ್ಯಕ್ಷ ಜಯಶೀಲಪ್ಪಗೌಡ ಹರತಾಳು, ಎಪಿಎಂಸಿ ಮಾಜಿ ಅಧ್ಯಕ್ಷ ಹಾರೋಹಿತ್ತಲು ಈಶ್ವರಪ್ಪಗೌಡ, ಪಕ್ಷದ ಮುಖಂಡರಾದ ಹಕ್ರೆ ಮಲ್ಲಿಕಾರ್ಜುನ, ಡಿ.ಈ.ಮಧುಸೂದನ್, ಆಸೀಫ್‌ಭಾಷಾಸಾಬ್, ಎನ್.ಚಂದ್ರೇಶ್, ಆರ್.ಹೆಚ್.ಶ್ರೀನಿವಾಸ್, ರವೀಂದ್ರ ಕೆರೆಹಳ್ಳಿ, ಪರಮೇಶ, ಕೌಶಿಕ್, ವರ್ಗೀಸ್, ಉಲ್ಲಾಸ ತೆಂಕೋಲ, ಧನಲಕ್ಷ್ಮಿ, ಇನ್ನಿತರ ಹಲವರು ಹಾಜರಿದ್ದರು.

Leave A Reply

Your email address will not be published.

error: Content is protected !!