ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ ಬಾಳೂರು ಗ್ರಾಮದ ಮಹಾಮಾಯೆ ಗೇರುಬೀಜ ಕಾರ್ಖಾನೆ ನೌಕರರು ಮತ್ತು ಚಿತ್ರನಟ ಅಪ್ಪು ಅಭಿಮಾನಿ ಬಳಗದವರಿಂದ ಇಂದು ಸಂಭ್ರಮದೊಂದಿಗೆ ಪುನೀತ್ ರಾಜ್‍ಕುಮಾರ್ ರವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು
ಗೇರುಬೀಜ ಫ್ಯಾಕ್ಟರಿಯಲ್ಲಿ ಕಟ್ಟಾ ಅಪ್ಪು ಅಭಿಮಾನಿ ಪುನೀತ್ ಎಂಬುವರು ಚಿತ್ರನಟ ಪುನೀತ್ ರಾಜ್‌ಕುಮಾರ್‌ರವರ ಭಾವಚಿತ್ರವನ್ನು ಇಟ್ಟು ಹುಟ್ಟುಹಬ್ಬವನ್ನು ಸಿಬ್ಬಂದಿಗಳೊಂದಿಗೆ ಅದ್ದೂರಿಯಾಗಿ ಸಡಗರ ಸಂಭ್ರಮದೊಂದಿಗೆ ಆಚರಿಸಿ ಕೇಕ್ ಕತ್ತರಿಸಿ ಮರೆಯದ ಮಾಣಿಕ್ಯ ಚಿತ್ರನಟ ಪುನೀತ್ ರಾಜ್‍ಕುಮಾರ್ ಬಗ್ಗೆ ಅಭಿಮಾನ ಮೆರೆದರು.
ಮಾಹಾಮಾಯೆ ಗೇರು ಬೀಜ ಫ್ಯಾಕ್ಟರಿಯ ಮಾಲೀಕರಾದ ಡಿ.ನರಸಿಂಹಕಾಮತ್, ಶೈಲಾ ಕಾಮತ್,ನಾಗರಾಜ್, ಕಟ್ಟಾ ಅಭಿಮಾನಿ ಪುನೀತ್,ಉಪೇಂದ್ರಬಾಳಿಗಾ,ರಮೇಶ್ ಪೈ, ಗಿರೀಶ್, ದಿನೇಶ್,ಇನ್ನೂ ಮುಂತಾದ ಗೇರುಬೀಜ ಕಾರ್ಖಾನೆಯ ನೌಕರವರ್ಗ ಹಾಜರಿದ್ದರು.