ಗ್ರಾಮ ಠಾಣಾ ಜಾಗ ಕಬಳಿಸುವ ಹುನ್ನಾರದಲ್ಲಿ ಮರಗಳ ಮಾರಣಹೋಮ ; ಅಧಿಕಾರಿಗಳ ದಿವ್ಯ ಮೌನ

0 0

ರಿಪ್ಪನ್‌ಪೇಟೆ; ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದ ಸರ್ವೇ ನಂ 56 ರ ಖುಷ್ಕಿ ಜಮೀನಿನ ಮಧ್ಯಭಾಗದ ಗ್ರಾಮ ಠಾಣಾ ಜಾಗವನ್ನು ಒತ್ತುವರಿ ಮಾಡುವ ನೆಪದಲ್ಲಿ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಮರಗಳನ್ನು ಕಡಿದು ಹಾಕಲಾದರೂ ಕೂಡಾ ಅರಣ್ಯ ಇಲಾಖೆಯವರಾಗಲಿ ಗ್ರಾಮಾಡಳಿತವಾಗಿಲಿ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆಂದು ಬಿ.ಜಿ.ಜಗದೀಶ್ ಆರೋಪಿಸಿದ್ದಾರೆ.


ಈ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಆಧಿಕಾರಿಗಳಿಗೆ ಹಾಗೂ ತಾಲ್ಲೂಕು ಪಂಚಾಯ್ತಿ ಇಓ ರವರಿಗೂ
ದೂರು ಸಲ್ಲಿಸಲಾದರೂ ಕೂಡಾ ಗಮನಹರಿಸದೇ ನಿರ್ಲಕ್ಷ್ಯದಿಂದಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಗ್ರಾಮ ಠಾಣಾ ಜಾಗವನ್ನು ಅಭಿವೃದ್ದಿ ಕಾರ್ಯಗಳಿಗೆ ಬಳಸಲು ಮೀಸಲಿಡುವಂತೆ ಬಿ.ಜಿ.ಜಗದೀಶ್ ಮನವಿಯಲ್ಲಿ ಆಗ್ರಹಿಸಿದ್ದಾರೆ.
 

Leave A Reply

Your email address will not be published.

error: Content is protected !!