ಚಲಿಸುತ್ತಿದ್ದ ಬೈಕ್‌ಗೆ ನರಿ ಡಿಕ್ಕಿ ; ಸವಾರನಿಗೆ ಗಂಭೀರ ಗಾಯ..!

0 0


ರಿಪ್ಪನ್‌ಪೇಟೆ: ಚಲಿಸುತ್ತಿದ್ದ ಬೈಕ್‌ಗೆ ನರಿ ಅಡ್ಡ ಬಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾದ ಘಟನೆ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ವರನಹೊಂಡದ ಮುಖ್ಯ ರಸ್ತೆಯಲ್ಲಿ ನಡೆದಿದೆ.


ಮೂಗುಡ್ತಿ ಕಡೆಯಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಬರುತ್ತಿದ್ದ ಬೈಕ್‌ಗೆ ನರಿ ಅಡ್ಡ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬಿದ್ದು ತೀವ್ರ ಸ್ವರೋಪದ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.


ಕುವೆಂಪು ನಗರದ ನಿವಾಸಿ ಉಪನ್ಯಾಸಕ ಶ್ರೀಧರ (50) ರವರಿಗೆ ತಲೆ ಹಾಗೂ ಮೈಕೈಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.


ಬೈಕ್ ಅಡ್ಡ ಬಂದಿದ್ದ ನರಿಗೆ ತೀವ್ರ ಗಾಯವಾಗಿದ್ದು ಘಟನೆ ನಡೆದ ಸ್ಥಳದಲ್ಲಿಯೇ ಜೀವನ್ಮರಣ ಹೋರಾಟದಲ್ಲಿದ್ದ ನರಿಯನ್ನು ಗಮನಿಸಿದ ಹಲವರು ತಕ್ಷಣ ಅರಸಾಳು-ಹೊಸನಗರ ಆರಣ್ಯ ಇಲಾಖೆಯವರಿಗೆ ತಿಳಿಸಿದ್ದು ವಿಷಯ ತಿಳಿಯುತ್ತಿದ್ದಂತೆ ಹೊಸನಗರ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಹಾಗೂ ಅರಸಾಳು ವಲಯ ಅರಣ್ಯಾಧಿಕಾರಿ ಬಾಬು ರಾಜೇಂದ್ರಪ್ರಸಾದ್ ಮತ್ತು ಸಿಬ್ಬಂದಿಗಳಾದ ನದಾಫ್, ಅನಿಲ್ ಮತ್ತು ಅಕ್ಷಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಅಪಾಯದ ಸ್ಥಿತಿಯಲ್ಲಿದ್ದ ನರಿಗೆ ಚಿಕಿತ್ಸೆ ನೀಡಿದರು.

Leave A Reply

Your email address will not be published.

error: Content is protected !!