ಜಿಂಕೆ ಕೊಂಬು ಮಾರಾಟಕ್ಕೆ ಯತ್ನ ; ಆರೋಪಿಗಳ ಬಂಧನ

0 0


ರಿಪ್ಪನ್‌ಪೇಟೆ: ಸಮೀಪದ ಹಾರ‍ನಹಳ್ಳಿ ಸೋಮಿನಕೊಪ್ಪ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಜಿಂಕೆ ಕೊಂಬು ಮಾರಾಟಕ್ಕೆ ಸಾಗಾಣಿಕೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯನ್ನಾದರಿಸಿ ಸಾಗರ ಆರಣ್ಯ ಸಂಚಾರಿ ದಳದ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ವಿನಾಯಕ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಹಾರ‍ನಹಳ್ಳಿ ಮಂಜುನಾಥ ಮತ್ತು ಸಚಿನ್ ಎಂಬ ಬಂಧಿತ ಆರೋಪಿಗಳಿಂದ ಜಿಂಕೆ ಕೊಂಬು ವಶ ಪಡಿಸಿಕೊಂಡು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ಪತ್ತೆ ಕಾರ್ಯಾಚರಣೆಯಲ್ಲಿ ಗಿರೀಶ್, ಕೃಷ್ಣ, ಮಹೇಶ್, ದಿನೇಶ್, ಚೈತ್ರಾ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!