ದೆಹಲಿ ಕೇಜ್ರಿವಾಲ್ ಸರ್ಕಾರದ ಆಡಳಿತ ಕಾರ್ಯ ಅಮೇರಿಕಾ ದೇಶವೇ ಪ್ರಶಂಸಿಸಿದೆ

0 0

ರಿಪ್ಪನ್‌ಪೇಟೆ: ಭ್ರಷ್ಟಾಚಾರ ನಿರ್ಮೂಲನೆಯೊಂದಿಗೆ ಕುಡಿಯುವ ನೀರು, ಫ್ರೀ ವಿದ್ಯುತ್, ಸರ್ಕಾರಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹೀಗೆ ಹಲವು ಜನಹಿತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಆಡಳಿತ ಕ್ರಮವನ್ನು ಅಮೇರಿಕಾ ದೇಶ ಪ್ರಶಂಸಿಸಿದೆ ಎಂದು ದಿಲ್ಲಿ ರಾಜ್ಯ ಸಭಾ ಸದಸ್ಯ, ಎಎಪಿ ಸಂಸ್ಥಾಪಕ ಸದಸ್ಯ ಸಹನಾಜ್ ಹಿಂದೂಸ್ತಾನಿ ಹೇಳಿದರು.

ರಿಪ್ಪನ್‌ಪೇಟೆಯ ಸಾಗರ ರಸ್ತೆಯಲ್ಲಿರುವ ಎಎಪಿ ಕಛೇರಿಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಅದರಲ್ಲಿಯೂ ಕರ್ನಾಟಕದಲ್ಲಿ ಇನ್ನೂ ಹೆಚ್ಚಾಗಿದೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು ಹೇಳುತ್ತಿವೆ. ಅದನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಎಎಪಿ ಪಕ್ಷಕ್ಕೆ ಒಂದು ಅವಕಾಶ ಮಾಡಿಕೊಡಿ. ದೆಹಲಿಯಂತೆ ಕರ್ನಾಟಕದಲ್ಲಿ ಮಾಡಿ ಮತದಾರರ ಮನಗೆಲ್ಲುವುದಾಗಿ ಹೇಳಿ, ದೆಹಲಿಯಲ್ಲಿಯೇ ನಮ್ಮ ಕೇಜ್ರಿವಾಲ್ ಸರ್ಕಾರ ಶಿಕ್ಷಣ, ವಿದ್ಯುತ್ ಮತ್ತು ಕುಡಿಯುವ ನೀರು ಸೇರಿದಂತೆ ಹಲವು ಜನಹಿತ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಉಚಿತವಾಗಿ ನೀಡುತ್ತಿದ್ದು ಇದರಿಂದಾಗಿ ಅಮೇರಿಕಾ ದೇಶವೇ ಬೆರಗಾಗಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದೆ ಎಂದ ಅವರು, ಈಗಾಗಲೇ ನಮ್ಮ ಪಕ್ಷದ ಕಾರ್ಯಕರ್ತರು ಕ್ಷೇತ್ರದ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದ ಮತದಾರರಲ್ಲಿ ದೆಹಲಿಯ ಕೇಜ್ರಿವಾಲ್ ಜಾರಿಗೊಳಿಸಿರುವ ಹಲವು ಜನಹಿತ ಕಾರ್ಯಗಳನ್ನು ಮನವರಿಕೆ ಮಾಡಿದ್ದಾರೆಂದು ಹೇಳಿದರು.

ಈ ಬಾರಿ ಕರ್ನಾಟಕದಲ್ಲಿ ಎಎಪಿ ಪಕ್ಷಕ್ಕೊಂದು ಅವಕಾಶ ಮಾಡಿಕೊಡುವಂತೆ ಮತದಾರ ಪ್ರಭುಗಳು ಮನಸ್ಸು ಮಾಡಿ ಸಾಗರ-ಹೊಸನಗರ ಕ್ಷೇತ್ರದ ಎಎಪಿ ಅಭ್ಯರ್ಥಿ ಕೆ.ದಿವಾಕರ್ ಬೆಂಬಲಿಸಿ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಎಎಪಿ ಮುಖಂಡರಾದ ರಾಜು ಚನ್ನಕೊಪ್ಪ, ಹಸನಬ್ಬ, ಕುಕ್ಕಳಲೇ ಈಶ್ವರಪ್ಪ, ಹನೀಫ್, ಇನ್ನಿತರರಿದ್ದರು.

Leave A Reply

Your email address will not be published.

error: Content is protected !!