ರಿಪ್ಪನ್‌ಪೇಟೆ: ದೇಶದ 33 ಕೋಟಿ ಜನಸಂಖ್ಯೆಯಿಂದ ಆಹಾರದ ಸಮಸ್ಯೆಯಿಂದಾಗಿ ತಿನ್ನುವ ಅನ್ನಕ್ಕೂ ಪರದಾಡುವ ಸ್ಥಿತಿ ಇತ್ತು ಆದರೆ ಈಗ ದೇಶದ ಜನಸಂಖ್ಯೆ 133 ಕೋಟಿಯಾಗಿದ್ದೂ ಆಹಾರದ ಸಮಸ್ಯೆ ಇಲ್ಲ ಕಾರಣ ನಮ್ಮ ದೇಶದಲ್ಲಿ ಉತ್ಪಾದನೆಯಾಗುವ ಆಹಾರವನ್ನು ಅಂತರ ದೇಶಗಳಿಗೆ ರಫ್ತು ಮಾಡುತ್ತಿದ್ದು ದೇಶದ ಜನಸಾಮಾನ್ಯರು ಹಸಿವಿನಿಂದ ಬಳಲದಂತೆ ಪಡಿತರ ನೀಡಲಾಗುತ್ತಿದೆ ಅದರೆ ವಸತಿಯ ಸಮಸ್ಯೆ ಕಾಡುತ್ತಿದೆ ಎಂದು ಶಾಸಕ ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.
ಇಲ್ಲಿನ ಬರುವೆ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯವರು 4.86 ಕೋಟಿ ರೂ. ವೆಚ್ಚದ ಮೆಟ್ರಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಅನ್ನಕ್ಕೆ ಕಷ್ಟವಿದ್ದ ದಿನಗಳು ಕಳೆದು ಈಗ ಆಹಾರ, ವಸ್ತ್ರ, ವಿಧ್ಯೆಗಳಲ್ಲಿ ಆಮೂಲಾಗ್ರ ಬದಲಾವಣೆಯೊಂದಿಗೆ ಅಭಿವೃದ್ದಿಯನ್ನು ಸಾಧಿಸಲಾಗಿದೆ. ಗ್ರಾಮೀಣ ಮಕ್ಕಳ ಕಲಿಕೆಗೆ ವಸತಿಯ ಅಗತ್ಯವಿದ್ದು ಇವೆಲ್ಲವನ್ನು ಅಭಿವೃದ್ದಿಗೊಳಿಸಿ ಸಮಾಜ ಕಲ್ಯಾಣ ಕಾರ್ಯದಲ್ಲಿ ತೊಡಗಿರುವುದು ನಮ್ಮ ಆಧ್ಯ ಕರ್ತವ್ಯವಾಗಿದೆ ಎಂದರು.
ಶಿವಮೊಗ್ಗ ಸಂಪರ್ಕ ರಸ್ತೆಯ ಮುಡುಬ-ಬೈರಾಪುರ ಬರುವೆ ರಸ್ತೆ ಅಭಿವೃದ್ದಿಗೆ ಒಂದು ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ಹಾಗೂ ಬೈರಾಪುರ-ಮುಡುಬ ಈಶ್ವರ ದೇವಸ್ಥಾನದ ಬಳಿ 25 ಲಕ್ಷ ರೂ. ವೆಚ್ಚದ ಸಭಾಭವನ ಕಾಮಗಾರಿ ಉದ್ಘಾಟನೆ, ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಸೇತುವೆ ಬಳಿ 1 ಕೋಟಿ ರೂ. ವೆಚ್ಚದ ಸೈಡ್‌ವಾಲ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಸಿದರು.
ಈ ಸಂದರ್ಭ ಅಂಬೇಡ್ಕರ್ ಅಭಿವೃಧ್ದಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ, ಗ್ರಾಮ ಪಂಚಾಯ್ತಿ ತಾಲ್ಲೂಕ್ ಬಿಜೆಪಿ ಆಧ್ಯಕ್ಷ ಗಣಪತಿ ಬಿಳಗೋಡು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ, ಆರ್.ಟಿ.ಗೋಪಾಲ, ಎನ್.ಸತೀಶ್, ಮುಡುಬ ನಾಗಭೂಷಣ, ಮೆಣಸೆ ಆನಂದ, ತಾ.ಪಂ.ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್, ಉಪಾಧ್ಯಕ್ಷೆ ಮಹಾಲಕ್ಷ್ಮಿ, ಗ್ರಾ.ಪಂ.ಸದಸ್ಯರಾದ ಪಿ.ರಮೇಶ್, ದಾನಮ್ಮ, ವನಮಾಲ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ.ಮಹೇಶ, ಮೇಲ್ವಿಚಾರಕ ರಾಘವೇಂದ್ರ ಕೆ.ಎಸ್, ಪಿಡಿಓ ಜಿ.ಚಂದ್ರಶೇಖರ್, ಅರಸಾಳು ಗ್ರಾ.ಪಂ.ಮಾಜಿ ಅಧ್ಯಕ್ಷ ಲೋಕೇಶ್, ರಾಜೇಶ್ ಬುಕ್ಕಿವರೆ, ಗಣಪತಿ ಕಂಚಿಕೆರೆ, ಇನ್ನಿತರರು ಹಾಜರಿದ್ದರು.