ಧಾರ್ಮಿಕ ಆಚರಣೆಗಳಿಂದ ನೆಮ್ಮದಿ ಕಾಣಲು ಸಾಧ್ಯ ; ಮೂಲೆಗದ್ದೆ ಶ್ರೀಗಳು

0 0

ರಿಪ್ಪನ್‌ಪೇಟೆ: ದೇವಸ್ಥಾನ ಮಂದಿರಗಳಲ್ಲಿ ಆಯೋಜಿಸುವ ಧಾರ್ಮಿಕ ಆಚರಣೆಗಳಿಂದ ಶಾಂತಿ ನೆಮ್ಮದಿಯನ್ನು ಕಾಣಬಹುದಾಗಿದೆ ಎಂದು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದ ಇತಿಹಾಸ ಪ್ರಸಿದ್ದ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನ ಮತ್ತು ಜಗನ್ಮಾತೆ ಅನ್ನಪೂರ್ಣೇಶ್ವರಿ ಆಮ್ಮನವರ ದೇವಸ್ಥಾನದ 6ನೇ ವರ್ಷದ ಪ್ರತಿಷ್ಟಾ ವರ್ಧಂತ್ಯುತ್ಸವ ಧಾರ್ಮಿಕ ಸಭೆಯ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಇತ್ತೀಚಿನ ದಿನಗಳಲ್ಲಿ ಗಳಿಸಿದ ಹಣವನ್ನು ದುಶ್ಚಟಗಳಿಗೆ ಬಳಸುವ ವಿದ್ಯಾವಂತ ಯುವಕರುಗಳು ಶಾಂತಿ ನೆಮ್ಮದಿಯಿಲ್ಲದೆ ಸದಾ ಚಿಂತೆಯಲ್ಲಿಯೇ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿ, ಗಳಿಸಿ ಹಣವನ್ನು ಇಂತಹ ಧಾರ್ಮಿಕ ಅಚರಣೆಗಳಿಗೆ ವಿನಿಯೋಗಿಸಿ ಜೀವನದಲ್ಲಿ ಶಾಂತಿ ನೆಮ್ಮದಿಯಿಂದ ಇರಲು ಸಾಧ್ಯವಾಗುವುದು.ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಮುಂದಿನ ಯುವಜನಾಂಗ ಅಳವಡಿಸಿಕೊಂಡಾಗ ನಮ್ಮ ಸಂಸ್ಕೃತಿ ಉಳಿಸಲು ಸಾಧ್ಯವಾಗುವುದೆಂದರು.

ಸಿದ್ದಿವಿನಾಯಕ ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಆರ್.ಇ.ಈಶ್ವರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ನಾಡಕಛೇರಿ ಉಪತಹಶೀಲ್ದಾರ್ ಹುಚ್ಚರಾಯಪ್ಪ, ಧರ್ಮದರ್ಶಿ ಸಮಿತಿಯ ಮಾಜಿ ಅಧ್ಯಕ್ಷ ಗಣೇಶ್ ಕಾಮತ್, ದೇವಸ್ಥಾನ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಸತೀಶ್, ಎಂ.ಡಿ.ಇಂದ್ರಮ್ಮ, ತುಳೋಜಿರಾವ್, ವೈ.ಜೆ.ಕೃಷ್ಣ, ಆಶಾ, ಜಯಲಕ್ಷ್ಮಿ, ನಾಗರತ್ನ ದೇವರಾಜ್, ಆಶಾ ಸತೀಶ್, ಸುಧೀಂದ್ರ ಪೂಜಾರಿ ಇನ್ನಿತರರು ಪಾಲ್ಗೊಂಡಿದ್ದರು.

ನಾಗರತ್ನ ಪ್ರಾರ್ಥಿಸಿದರು. ಉದಯಕುಮಾರ್ ಸ್ವಾಗತಿಸಿದರು. ಎನ್.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Leave A Reply

Your email address will not be published.

error: Content is protected !!