ರಿಪ್ಪನ್‌ಪೇಟೆ: ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶ ಹೊರಬೀಳುತ್ತಿದ್ದಂತೆ ರಿಪ್ಪನ್‌ಪೇಟೆಯಲ್ಲಿ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ತಂಡೋಪ ತಂಡವಾಗಿ ಜಮಾಯಿಸಿ ಗೆಲುವಿನ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರಿಗೆ ಸಿದ್ದಪ್ಪನಗುಡಿ ಬಳಿ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.
ಸಿದ್ದಪ್ಪನಗುಡಿ ಸಮೀಪದಲ್ಲಿ ಸಾವಿರಾರು ಜನರು ಅದ್ದೂರಿಯಾಗಿ ಸ್ವಾಗತಿಸಿ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಅಭಿಮಾನಿಯೋರ್ವ 108 ಈಡುಗಾಯಿ ಒಡೆದು ಹರಿಕೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ಅಭಿಮಾನಿಗಳಿಗೆ ನನ್ನ ಗೆಲುವಲ್ಲ ಅಭಿಮಾನಿಗಳ ಗೆಲುವು ಎಂದು ಹೇಳಿ ಹಣ ಬಲದ ಗೆಲುವು ಅಲ್ಲ ಇದು ಜನರ ಸ್ವಾಭಿಮಾನದ ಗೆಲುವು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿನಾಯಕ ವೃತ್ತದಲ್ಲಿ ಅಭಿಮಾನಿ ಕಾರ್ಯಕರ್ತರುಗಳಿಂದ ಪಟಾಕಿಗಳ ಸುರಿಮಳೆ ಮುಗಿಲು ಮುಟ್ಟಿತು ದ್ವಿಚಕ್ರವಾಹನಗಳ ರ‍್ಯಾಲಿಯೊಂದಿಗೆ ಯುವಕರು ಕೇಸರಿ ಶಾಲು ಹಾಕಿಕೊಂಡು ಮೆರವಣಿಗೆಯಲ್ಲಿ ಗೋಪಾಲಕೃಷ್ಣ ಬೇಳೂರು ಪರ ಜೈ ಘೋಷಣೆ ಕೂಗಿದರು.
ಜಿ.ಪಂ.ಮಾಜಿ ಅಧ್ಯಕ್ಷ, ಕೆಪಿಸಿಸಿ ವಕ್ತರ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ,ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಬಂಡಿ ಶ್ವೇತಾ, ಉಬೇದುಲ್ಲಾ ಷರೀಫ್, ಉಮಾಕರ್, ಉಲ್ಲಾಸ, ರಮೇಶ್,ಪರಮೇಶ, ಸಿದ್ದಿವಿನಾಯಕ ದೇವಸ್ಥಾನದ ಧರ್ಮದರ್ಶಿ ಸಮಿತಿಯ ಈಶ್ವರಶೆಟ್ಟಿ, ಗಣೇಶ್‌ಕಾಮತ್, ಎಂ.ಡಿ.ಇಂದ್ರಮ್ಮ, ಗ್ರಾ.ಪಂ.ಸದಸ್ಯೆ ಧನಲಕ್ಷ್ಮಿ, ಉಮೇಶ್, ಸುರೇಶ್ ಜೇನಿ, ಮಂಜಪ್ಪ ಇನ್ನಿತರರು ಹಾಜರಿದ್ದರು.