ಪ್ರೋ ಕಬಡ್ಡಿ 10ನೇ ಆವೃತ್ತಿಗೆ ರಿಪ್ಪನ್‌ಪೇಟೆ ಯುವಕ ಆಯ್ಕೆ ; ಹರತಾಳು ಹಾಲಪ್ಪ ಅಭಿನಂದನೆ

0 12


ರಿಪ್ಪನ್‌ಪೇಟೆ : ಪ್ರೋ ಕಬ್ಬಡ್ಡಿ 10ನೇ ಅವೃತ್ತಿಯ ಯು.ಪಿ ಯೋಧ ತಂಡಕ್ಕೆ ಹೊಸನಗರ ತಾಲ್ಲೂಕಿನ ಬಾಳೂರು ಗ್ರಾಮ ಪಂಚಾಯ್ತಿ ಸದಸ್ಯ ರಾಜಶೇಖರ್‌ರವರ ಪುತ್ರ ಗಗನ್‌ಗೌಡ ಆಯ್ಕೆಯಾಗಿದ್ದು ಇಂದು ಮಾಜಿ ಶಾಸಕ ಹರತಾಳು ಹಾಲಪ್ಪ ಗಗನ್‌ಗೌಡರ ಮನೆಗೆ ಭೇಟಿ ನೀಡಿ ಅಭಿನಂದಿಸಿ ಶುಭ ಹಾರೈಸಿದರು.


ಗಗನ್‌ಗೌಡರ ಈ ಸಾಧನೆಗೆ ಮುಚ್ಚುಗೆ ವ್ಯಕ್ತಪಡಿಸಿ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆ ಜೀವಂತವಾಗಿ ಉಳಿದಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದು ಪ್ರೋತ್ಸಾಹದ ಕೊರತೆಯಿಂದಾಗಿ ನಮ್ಮ ಮಕ್ಕಳು ಹಿಂದೆ ಉಳಿದಿದ್ದಾರೆ ಇದಕ್ಕೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವೆಂದರು.


ಈ ಸಂದರ್ಭದಲ್ಲಿ ನೇಮಾಕ್ಷಿಗೌಡ, ನೆವಟೂರು ದೇವೇಂದ್ರಪ್ಪಗೌಡ, ಜಯದೇವ, ಗಣಪತಿ, ಆನಂದ ಮೆಣಸೆ, ಕೀರ್ತಿಗೌಡ, ಸಂತೋಷ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!