ರಿಪ್ಪನ್‌ಪೇಟೆ: ಸರ್ಕಾರದ ಜನಹಿತ ಕಾರ್ಯಕ್ರಮಗಳಲ್ಲಿ ಒಂದಾದ ಬಸವ-ಅಂಬೇಡ್ಕರ್ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆ ಜರುಗಿತು.
ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿಗೆ 66 ಮನೆಗಳು ಮಂಜೂರಾಗಿದ್ದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 16 ಮನೆಗಳು ಹಾಗೂ ಅಲ್ಪಸಂಖ್ಯಾತರಿಗೆ 15 ಹಾಗೂ ಸಾಮಾನ್ಯ 30 ಮನೆಗಳು ಬಂದಿದ್ದು ನಿವೇಶನವಿದ್ದು ಒಂದು ಲಕ್ಷದೊಳಗೆ ಆದಾಯವಿರುಬೇಕು ಮತ್ತು ಜಾತಿ ದೃಢೀಕರಣ ಪತ್ರ ಮತ್ತು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ನಕಲು ತಕ್ಷಣ ನೀಡಿದರೆ ಮನೆ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಅಲ್ಲದೆ ಈ ಮೇಲ್ಕಂಡ ಎಲ್ಲ ದಾಖಲಾತಿಗಳನ್ನು ಕೊಟ್ಟ ತಕ್ಷಣ ಜಾಗದಲ್ಲಿ ಜಿ.ಪಿಎಸ್ ಮಾಡಿ ಮನೆಗೆ ನಾಲ್ಕು ಹಂತದಲ್ಲಿ ಹಣ ಮಂಜೂರು ಮಾಡುವುದಾಗಿ ವಿವರಿಸಿದರು.
ಈ ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
ಪಿಡಿಒ ಜಿ.ಚಂದ್ರಶೇಖರ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.