ಬೆಂಕಿ ತಗುಲಿ ಹುಲ್ಲಿನ ಬಣವೆ ಸಂಪೂರ್ಣ ಸುಟ್ಟು ಭಸ್ಮ ; ಲಕ್ಷಾಂತರ ರೂ. ನಷ್ಟ !

0 15

ರಿಪ್ಪನ್‌ಪೇಟೆ : ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿದ್ದ ಒಣ ಹುಲ್ಲಿನ ಬಣವೆಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಮಂಗಳವಾರ ಮಧ್ಯಾಹ್ನ ಸೂಡೂರು ಗೇಟ್ ಬಳಿ ನಡೆದಿದೆ.

ರಾಘವೇಂದ್ರ ಎಂಬುವವರಿಗೆ ಸೇರಿದ ಮನೆಯ ಅಂಗಳದಲ್ಲಿದ್ದ ಒಣ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಕಾಣಸಿಕೊಂಡಿದೆ. ಈ ವೇಳೆ ಮನೆಯಲ್ಲಿ ಮಹಿಳೆಯರು ಬಿಟ್ಟರೆ ಯಾರು ಇರಲಿಲ್ಲ ಕೂಡಲೇ ಮಹಿಳೆಯರು ಮನೆಯ ಯಜಮಾನರಿಗೆ ವಿಷಯ ತಿಳಿಸಿದರು ನಂತರ ನೀರು ಹಾಯಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ ಆದರೆ ಇದೇ ವೇಳೆ ವಿದ್ಯುತ್ ಇರಲಿಲ್ಲ. ತಕ್ಷಣ ಅಗ್ನಿಶಾಮಕದಳಕ್ಕೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ವಾಹನ ಬರುವಷ್ಟರಲ್ಲಿ ಜಾನುವಾರುಗಳ ಮೇವಿಗಾಗಿ ಸಂಗ್ರಹಿಸಿದ್ದ ಸುಮಾರು ಒಂದೂವರೆ ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ 500 ಕ್ಕೂ ಹೆಚ್ಚು ಹುಲ್ಲಿನ ಪಿಂಡಿಗಳು ಬೆಂಕಿಗಾಯುತಿಯಾಗಿದೆ. ನಂತರ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಮನೆಯವರು ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಈ ಬೆಂಕಿ ಅವಘಡವನ್ನು ಗಮನಿಸಿ ಸೂಕ್ತ ಪರಿಹಾರ ನೀಡಲು ಮನವಿ ಮಾಡಿದರು.

Leave A Reply

Your email address will not be published.

error: Content is protected !!