ಬೆಳೆ ವಿಮೆ ಮಲೆನಾಡಿನ ರೈತರಿಗೆ ಪ್ರಯೋಜನವಿಲ್ಲ

0 7

ರಿಪ್ಪನ್‌ಪೇಟೆ: ಹೊಸನಗರ ತಾಲ್ಲೂಕು ಹೆಚ್ಚು ಮಳೆ ಸುರಿಯುವ ಪ್ರದೇಶವೆಂದು ಹಾಗೂ ಮಳೆ ಮಾಪನದಲ್ಲಿನ ಅಂಕಿ ಸಂಖ್ಯೆಯನ್ನಾದರಿಸಿ ಸರ್ಕಾರ ಹೊಸನಗರ ತಾಲ್ಲೂಕಿನ ರೈತರಿಗೆ ಅವೈಜ್ಞಾನಿಕ ವರದಿಯಿಂದ ಮಲೆನಾಡಿನ ನಡುಮನೆ ರೈತರು ವಂಚಿತರಾಗುವಂತಾಗಿ ಇತ್ತ ಬೆಳೆಯೂ ಇಲ್ಲದೇ ಅತ್ತ ವಿಮಾ ಪರಿಹಾರವೂ ಇಲ್ಲದೆ ಪರಿತಪ್ಪಿಸುವಂತಾಗಿದೆ ಎಂದು ಹಿರಿಯ ಸಹಕಾರಿ ಧುರೀಣ ಎಸ್.ಜಿ.ರಂಗನಾಥ್ ರೈತರ ಬಗ್ಗೆ ಕೇಳೋರಿಲ್ಲದಂತಾಗಿರುವ ಬಗ್ಗೆ ಖೇದ ವ್ಯಕ್ತಪಡಿಸಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಹಕಾರಿ ಸಚಿವರಿಗೆ ಪತ್ರ ಬರೆದಿರುವುದಾಗಿ ಮಾಧ್ಯಮದವರಿಗೆ ವಿವರಿಸಿದರು.

ಮಲೆನಾಡಿನ ನಡುಮನೆ ಕೋಡೂರು, ಹೊಸನಗರ, ನಗರ, ಮಾಸ್ತಿಕಟ್ಟೆ, ಚಕ್ರಾನಗರ, ನಿಟ್ಟೂರು, ಮತ್ತಿಮನೆ, ಸಂಪೆಕಟ್ಟೆ ಆ ಕಡೆಯಲ್ಲಿ ಮಳೆ ಪ್ರಮಾಣವನ್ನು ಗಮನಿಸಿ ಹೊಸನಗರದ ಮಳೆ ಮಾಪಕದ ವರದಿಯನ್ನಾದರಿಸಿ ಅತಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ ಎಂಬ ಅಧಿಕಾರಿಗಳ ವರದಿಯನ್ನಾದರಿಸಿ ಸರ್ಕಾರ ಹೊಸನಗರ ತಾಲ್ಲೂಕಿನ ರೈತರಿಗೆ ವಂಚಿಸುವಂತಾಗಿದೆ. ಆದರೆ ಇಲ್ಲಿನ ವಸ್ತು ಸ್ಥಿತಿಯೇ ಬೇರೆಯಾಗಿದೆ ಇದನ್ನು ಅರಿಯದೇ ಅಧಿಕಾರಿಗಳ ವರದಿಯನ್ನ ಗಮನದಲ್ಲಿಟ್ಟುಕೊಂಡ ಸರ್ಕಾರ ರಿಪ್ಪನ್‌ಪೇಟೆ, ಹುಂಚ ಹೋಬಳಿಯ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಅರಸಾಳು, ಬೆಳ್ಳೂರು, ಹೆದ್ದಾರಿಪುರ, ಅಮೃತ, ಹುಂಚ, ಕೆಂಚನಾಲ, ಕೋಡೂರು, ಬಾಳೂರು, ಹರತಾಳು, ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೂಡಾ ತಾಲ್ಲೂಕಿನ ಮಳೆಯ ಮಾಪನ ವರದಿಯಿಂದ ನಾವುಗಳು ವಂಚಿರತಾಗುವಂತಾಗಿದೆ. ಈ ಬಗ್ಗೆ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿ ಅವರುಗಳು ಸಮೀಕ್ಷಾ ವರದಿಯನ್ನಾದರಿಸಿ ಈ ಎರಡು ಹೋಬಳಿ ವ್ಯಾಪ್ತಿಯಲ್ಲಿ ಬೆಳೆ ವಿಮೆ ಮಾಡಿಸುವ ಮೂಲಕ ಅನಾವೃಷ್ಠಿಯ ಬೆಳೆ ಪರಿಹಾರ ನೀಡುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ರಾಜ್ಯಪಾಲರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.

Leave A Reply

Your email address will not be published.

error: Content is protected !!