ಮಂಗಳವಾರ ಕೆಂಚನಾಲ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ

0 0


ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ದ ಶ್ರೀ ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವವು ಜುಲೈ 11 ರಂದು ಮಂಗಳವಾರ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಜರುಗಲಿದೆ ಎಂದು ದೇವಸ್ಥಾನ ಧರ್ಮದರ್ಶಿಗಳ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವರ್ಷದಲ್ಲಿ ಎರಡು ಭಾರಿ ಆಚರಿಸಲಾಗುವ ಈ ಜಾತ್ರಾ ಮಹೋತ್ಸವವು ಮಳೆಗಾಲದಲ್ಲಿ ಆಷಾಡ ಮಾಸದ ಮಂಗಳವಾರದಂದು ಬೇಸಿಗೆಯಲ್ಲಿ ಬುಧವಾರದಂದು ಆಚರಿಸುವುದು ಇಲ್ಲಿನ ವಿಶೇಷವಾಗಿದೆ.


ನಾಟ್ಯ ನೃತ್ಯ ತರಗತಿ ಆರಂಭ:

ಸಾಗರದ ನಾಟ್ಯ ತರಂಗ ಟ್ರಸ್ಟ್ ಇವರು ರಿಪ್ಪನ್‌ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿನ ಲಕ್ಷ್ಮಿ ಟ್ರ್ಯಾಕ್ಟರ್ ಶೋರೂಂ ಮೇಲ್ಭಾಗದ ಕಟ್ಟಡದಲ್ಲಿ ಭರತನಾಟ್ಯ ತರಬೇತಿ ಶಾಲೆಯನ್ನು ಆರಂಭಿಸಿದ್ದಾರೆ.
ಈ ತರಬೇತಿ ಶಾಲೆಯ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಭರತನಾಟ್ಯ ತರಂಗ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!