ರಿಪ್ಪನ್‌ಪೇಟೆ: ಹರತಾಳು ಹಾಲಪ್ಪ ಅವರು ಹಿಂದೆ ಸೊರಬದಲ್ಲಿ ಬಂಗಾರಪ್ಪ ಕುಟುಂಬವನ್ನು ಒಡೆದು ಮನೆ ಹಾಳು ಮಾಡಿದ್ರು ಈಗ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಅವರ ಕುಟುಂಬ ಒಡೆದು ಮನೆ ಹಾಳು ಮಾಡೋಕೆ ರೆಡಿ ಆಗಿದ್ದಾರೆಂದು ಮಾಜಿ ಶಾಸಕ ಹಾಗೂ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಪಟ್ಟಣದಲ್ಲಿ ಚುನಾವಣಾ ಪ್ರಚಾರ ಭಾಷಣ ಮುಗಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ತನ್ನ ರಾಜಕೀಯ ಜೀವನಕ್ಕಾಗಿ ಮನೆ ಹಾಳು ಮಾಡೋ ಕೆಲಸ ಗೊತ್ತಿರುವುದು ರಾಜ್ಯದಲ್ಲಿ ಹರತಾಳು ಹಾಲಪ್ಪನಿಗೆ ಮಾತ್ರ. ಹಾಲಪ್ಪನ ಬಗ್ಗೆ ನಾನು ಟೀಕೆ ಮಾಡೋದೇ ಬೇಡ ಅವರ ಭ್ರಷ್ಟಾಚಾರ, ಪಕ್ಷ ಒಡೆದಿದ್ದನ್ನೆ ಅವರ ಪಕ್ಷದವರೇ ಹೇಳ್ತಿದ್ದಾರೆ. ವಿರೋಧ ಪಕ್ಷವಾಗಿ ನಾವು ಕೂಡ ನಮ್ಮ ಕೆಲಸ ಮಾಡಿದ್ದೇವೆ. ಈಗಾಗಲೇ ಹೊಸನಗರ-ಸಾಗರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದೇನೆಂದು ಗೋಪಾಲಕೃಷ್ಣ ಬೇಳೂರು ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ಭಾರಿ ಬೆಂಬಲಿಗರು ಕಾರ್ಯಕರ್ತರು ಆಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದು ಓ¥ನಿಂಗ್ ನನಗೆ ನೀಡಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಶೆಟ್ಟರ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತೆ ಆಗಿದೆ. ಮಾಜಿ ಸಿಎಂ ಬಿಜೆಪಿ ಕಟ್ಟಾಳು ಕಾಂಗ್ರೆಸ್ ಪಕ್ಷಕ್ಕೆ ಬಂದಿರುವುದು ಖುಷಿಯ ವಿಚಾರವೆಂದರು.
ಈ ಬಾರಿ ಗೆಲುವು ನನ್ನದೆ:
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಗೆಲುವು ನನ್ನದೇ ಬಿಜೆಪಿ ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರದಲ್ಲಿ ಮನೆಯೊಂದು ಮೂರು ಬಾಗಿಲಿನಂತಾಗಿಗೆ. ಈಗಾಗಲೇ ಬಿಜೆಪಿ ಪಕ್ಷದ ಹಿರಿಯ ಮುಖಂಡರುಗಳು ಹಾಗೂ ಪ್ರಾಮಾಣಿಕ ಕಾರ್ಯಕರ್ತರು ಹರತಾಳು ಹಾಲಪ್ಪ ವಿರುದ್ಧ ಸಿಡಿದೆದ್ದಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯರಾದ ರಾಮಚಂದ್ರ, ಶ್ವೇತಾ, ತಾ.ಪಂ ಮಾಜಿ ಅಧ್ಯಕ್ಷ ವಾಸಪ್ಪಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಹಾರೋಹಿತ್ತಲು ಹೆಚ್.ವಿ.ಈಶ್ವರಪ್ಪಗೌಡ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಎನ್.ಚಂದ್ರೇಶ್, ಡಿ.ಈ.ಮಧುಸೂದನ್, ಪ್ರಕಾಶ್ ಪಾಲೇಕರ್, ಆಸೀಫ್ ಭಾಷಾ,
ಉಲ್ಲಾಸ ತೆಂಕೋಲ, ಮಳವಳ್ಳಿ ಮಂಜುನಾಥ, ಜಿ.ಆರ್.ಗೋಪಾಲಕೃಷ್ಣ, ರವೀಂದ್ರ ಕೆರೆಹಳ್ಳಿ, ಬಿ.ಎಸ್.ಎನ್.ಎಲ್ ಶ್ರೀಧರ, ಆರ್.ಹೆಚ್.ಶ್ರೀನಿವಾಸ ಆಚಾರ್, ಧನಲಕ್ಷ್ಮಿ, ಸಾಹಿದ ಲೇಖನಮೂರ್ತಿ ಇನ್ನಿತರರು ಹಾಜರಿದ್ದರು.