ಮಸೀದಿ ಬಳಿ ಮದ್ಯದಂಗಡಿ ಆರಂಭ ವಿರೋಧಿಸಿ ಮುಸ್ಲಿಂ ಸಮುದಾಯದಿಂದ ಮೌನ ಪ್ರತಿಭನೆಗೆ ಸಿದ್ದತೆ

0 9

ರಿಪ್ಪನ್‌ಪೇಟೆ: ಸರ್ಕಾರದ ಅಬಕಾರಿ ನಿಯಮದಂತೆ ಮಸೀದಿ ಚರ್ಚ್ ದೇವಸ್ಥಾನ ಹಾಗೂ ಶಾಲೆ ಆಸ್ಪತ್ರೆಗೆ 100 ಮೀಟರ್ ಸುತ್ತಳತೆಯಲ್ಲಿ ಮದ್ಯದಂಗಡಿ
ತೆರೆಯಬಾರದೆಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಇಲ್ಲಿನ ಹೊಸನಗರ ರಸ್ತೆಯ ಜುಮ್ಮಾ ಮಸೀದಿಯ ಕೇವಲ ಕೆಲವೇ ಅಂತರದಲ್ಲಿರುವ ರಾಯಲ್ ಕಂಪರ್ಟ್ ಕಟ್ಟಡದಲ್ಲಿ ಸಿ.ಎಲ್.ನಂ 7 ಬಾರ್ ಅಂಡ್ ರೆಸ್ಟೊರೆಂಟ್‌ಯನ್ನು ಆರಂಭಿಸುವ ಎಲ್ಲ ಸಿದ್ದತೆ ನಡೆದಿದ್ದು ಈ ಬಗ್ಗೆ ಇಂದು ಮುಸ್ಲಿಂ ಸಮುದಾಯದವರು ಶುಕ್ರವಾರದ ನಮಾಜ್ (ಪ್ರಾರ್ಥನೆ) ಮುಗಿಸಿ ಠಾಣೆಗೆ
ತೆರಳಿ ಮಸೀದಿ ಬಳಿ ಮದ್ಯದಂಗಡಿ ಆರಂಭಿತ್ತಾರೆಂಬ ಖಚಿತ ಮಾಹಿತಿಯನ್ನಾದರಿ ನಮ್ಮ ಸಮುದಾಯದವರು ಮೌನ ಪ್ರತಿಭಟನೆ ನಡೆಸುತ್ತೇವೆಂದು ಮನವಿ ಮಾಡಿದರು.

ಮುಸ್ಲಿಂ ಸಮುದಾಯದವರ ಮನವಿಗೆ ಸ್ಪಂದಿಸಿದ ಪಿಎಸ್‌ಐ ಎಸ್.ಪಿ.ಪ್ರವೀಣ್ ರಾಜ್ಯ‌ ಉಚ್ಚನ್ಯಾಯಾಲಯದಲ್ಲಿ ಈ ಕುರಿತು ಕೇಸ್ ದಾಖಲಾಗಿದೆ. ಅಲ್ಲದೆ ಮದ್ಯದಂಗಡಿ‌ ಆರಂಭಕ್ಕೆ ಅಬಕಾರಿ ಇಲಾಖೆಯ ಪ್ರವಾಸೋದ್ಯಮದ ಅಡಿಯಲ್ಲಿ ಸರ್ವೇ ವರದಿಯನ್ನಾದರಿಸಿ ಪರವಾನಿಗೆ ನೀಡಿರುತ್ತಾರೆ. ಅವರು ಈಗಾಗಲೇ ಇದೇ ಭಾನುವಾರದಂದು ಅಂಗಡಿ ಪ್ರಾರಂಭಕ್ಕೆ ಪೊಲೀಸ್ ರಕ್ಷಣೆ ಕೋರಿದ್ದಾರೆ. ತಮ್ಮ ಹಕ್ಕು ಕೇಳುವುದರಲ್ಲಿ ತಪ್ಪಿಲ್ಲ. ನೀವುಗಳು ಮೌನವಾಗಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲು ಯಾವುದೇ ತಕರಾರು ಇಲ್ಲ. ಆದರೆ, ಯಾರಾದರೂ ಮದ್ಯದಂಗಡಿ ಮುಂದೆ ಪ್ರತಿಭಟನೆಯ ವೇಳೆ ಗಲಾಟೆ ನಡೆಸಿದರೆ ಯಾವುದೇ ಮುಲಾಜು ಇಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ
ಕೈಗೊಳ್ಳಬೇಕಾಗುವುದು ಅನಿರ್ವಾಯವಾಗುತ್ತದೆಂದು ಮುಸ್ಲಿಂ ಬಾಂಧವರಿಗೆ ತಿಳುವಳಿಕೆ ನೀಡಿದರು.

ಈ ಮಧ್ಯೆ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಮಾತನಾಡಿ, ಶಿವಮೊಗ್ಗ-ಹೊಸನಗರ ಮಾರ್ಗದ ಮುಖ್ಯ ರಸ್ತೆಯಲ್ಲಿರುವ ಮಸೀದಿಗೂ ಮತ್ತು ಮದ್ಯದಂಗಡಿಗೂ ಇರುವ ಅಂತರ ಎಷ್ಟು ಈ ಬಗ್ಗೆ ತಮಗೆ ನೀಡಲಾದ ದೂರದ ಮಾಹಿತಿ ಕೊಡಿ ಎಂದು ಕೇಳಿದಾಗ ಪಿಎಸ್‌ಐ ನಮ್ಮ ಬಳಿಯಲ್ಲಿ ಯಾವುದೇ ದಾಖಲೆಗಳು ಇಲ್ಲ. ತಮಗೆ ಬೇಕಾದರೆ ಅಬಕಾರಿ ಇಲಾಖೆಯ ಹೊಸನಗರ ಕಛೇರಿಗೆ ಮಾಹಿತಿ ಹಕ್ಕಿನಡಿ ಕೇಳಿದರೆ ಮಾಹಿತಿ ಲಭ್ಯವಾಗುವುದೆಂದರು.

ಜುಮ್ಮಾ ಮಸೀದಿಯ ಅಧ್ಯಕ್ಷ ಮಹಮದ್ ಮಾತನಾಡಿ, ನಾವುಗಳು ಮಸೀದಿಗೆ ಸಮೀಪವೇ ಮದ್ಯದಂಗಡಿ ಆರಂಭವಾಗುವುದನ್ನು ವಿರೋಧಿಸುತ್ತೇವೆ. ಅಲ್ಲದೆ ಸಮುದಾಯದವರು ಆರಂಭವಾಗುವ ಕಟ್ಟಡದ ಮುಂಭಾಗದ ಲೋಕೋಪಯೋಗಿ ರಸ್ತೆ ಬದಿ ಕುಳಿತು ಮೌನಪ್ರತಿಭಟನೆ ನಡೆಸುತ್ತೇವೆ. ನಮಗೆ ಅವಕಾಶ ಕೊಡುವ ಮೂಲಕ ಸಂಬಂಧಪಟ್ಟ ಅಬಕಾರಿ ಇಲಾಖೆಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಇನ್ನೊಮ್ಮೆ ಮಸೀದಿಗೂ ಮತ್ತು ಮದ್ಯದಂಗಡಿ ಆರಂಭಿಸುವ ಕಟ್ಟಡಕ್ಕೂ ಇರುವ ಅತಂರವನ್ನು ಸಾರ್ವಜನಿಕವಾಗಿ ಪರಿಶೀಲನೆ ನಡೆಸಿ
ಮದ್ಯದಂಗಡಿ ಆರಂಭಿಸದಮತೆ ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!