ಮುಕ್ತ ಜಿನದತ್ತ ಐತಿಹಾಸಿಕ ಕಾದಂಬರಿ ಬಿಡುಗಡೆ | ಶ್ರದ್ಧಾ-ಭಕ್ತಿಗಳು ಜಾಗೃತವಾಗಲಿ ; ಹೊಂಬುಜ ಶ್ರೀಗಳು

0 1

ರಿಪ್ಪನ್‌ಪೇಟೆ : ಸಾವಿರಾರು ವರ್ಷಗಳ ಪೂರ್ವದಲ್ಲಿ ಹೊಂಬುಜ ಕ್ಷೇತ್ರದ ಅಧಿದೇವತೆ ಮಾತೆ ಶ್ರೀ ಪದ್ಮಾವತಿ ಅಮ್ಮನವರು ಇಲ್ಲಿಗೆ ಬಂದು ನೆಲೆನಿಂತು ಈ ನಾಡನ್ನು ಸುಭೀಕ್ಷಗೊಳಿಸಲು ಜಿನದತ್ತರಾಯನು ಕಾರಣವಾದಂತೆ ಅಮ್ಮನವರ ಚರಿತ್ರೆಯ ಹಿನ್ನೆಲೆಯಲ್ಲಿ ರಚನೆಗೊಂಡ “ಮುಕ್ತ ಜಿನದತ್ತ” ಐತಿಹಾಸಿಕ ಕಾದಂಬರಿಯು ಜನಮಾನಸದಲ್ಲಿ ಅಮ್ಮನವರ ಬಗೆಗಿನ ಶ್ರದ್ಧಾ-ಭಕ್ತಿಗಳು ಜಾಗೃತಗೊಂಡು ಜನಹಿತ ಕೇಂದ್ರಿತ ಪ್ರಗತಿಯು ಸಾಧ್ಯವಾಗಲು ಕಾರಣವಾಗಲಿ ಎಂದು ಹೊಂಬುಜದ ಜೈನ ಮಠದ ಪೀಠಾಧಿಕಾರಿಗಳಾದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರು ಆಶೀರ್ವದಿಸಿದರು.

ಅವರು ಶ್ರೀಮಠದಲ್ಲಿ ಇದೇ ಮಾರ್ಚ್ 15 ರಂದು ಕಾರ್ಕಳದ ನಿವಾಸಿ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿವೃತ್ತ ಅಧಿಕಾರಿಯಾದ ಶ್ರೀ ಜಯಕೀರ್ತಿ ಎಚ್. ರವರು ರಚಿಸಿ ಪ್ರಕಟಿಸಿರುವ “ಮುಕ್ತ ಜಿನದತ್ತ” ಐತಿಹಾಸಿಕ ಕಾದಂಬರಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.

ಈ ಕೃತಿಗೆ ಎಲ್ಲೆಡೆ ಪ್ರಶಂಸೆ, ಮನ್ನಣೆ ದೊರೆಯಲಿ, ಲೇಖಕರಿಂದ ಇನ್ನು ಹೆಚ್ಚಿನ ಕೃತಿಗಳು ಹೊರಬರಲಿ ಜನರಲ್ಲಿ ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸ ಬೆಳೆಯಲಿ ಎಂದು ಹಾರೈಸಿದರು.
ಶ್ರೀಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ಮಗದುಮ್ಮ ಅವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!