ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ; ಬಲಿಗಾಗಿ ಕಾದು ನಿಂತ ವಿದ್ಯುತ್ ಕಂಬ..!
ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ ಬೆಳ್ಳೂರು ಸಂಪರ್ಕ ತಳಲೆ ಬಾಳೆಕೊಡ್ಲು ಬಳಿ ಮುಖ್ಯ ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ಕಂಬ ರಸ್ತೆಗೆ ಬಾಗಿದ್ದು ರಸ್ತೆಯಲ್ಲಿ ಓಡಾಡಲು ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಯಾಗಿದೆ.
ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿ ತಳಲೆ ಬಳಿಯ ಬೆಳ್ಳೂರು ಸಂಪರ್ಕ ರಸ್ತೆಯಲ್ಲಿ 11 ಕೆ.ವಿ.ವಿದ್ಯುತ್ ಕಂಬ ಅಪಾಯದ ಸ್ಥಿತಿಯಲ್ಲಿದ್ದರೂ ಸಹ ಮೆಸ್ಕಾಂ ಇಲಾಖೆ ಜಾಣ-ಕುರುಡು ನೀತಿ ಅನುಸರಿಸುತ್ತಿದೆ. ಈ 11 ಕೆ.ವಿ.ವಿದ್ಯುತ್ ಕಂಬವು ಶಿಥಿಲಗೊಂಡು ರಸ್ತೆಗೆ ಬಾಗಿದ್ದು ಜೋರಾಗಿ ಗಾಳಿ ಬೀಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಶಿಥಿಲವಾಗಿರುವ ಕಂಬವೂ ಯಾವುದೇ ಸಂದರ್ಭದಲ್ಲಿಯೂ ರಸ್ತೆಗೆ ಉರುಳಿ ಬೀಳುವುದೋ ಎಂಬ ಆತಂಕದಲ್ಲಿ ಸಾರ್ವಜನಿಕರು ಇದ್ದಾರೆ.

ಈ ಬಗ್ಗೆ ತಕ್ಷಣ ಇಲಾಖೆಯವರು ಗಮನಹರಿಸಿ ಅಪಾಯದ ಸ್ಥಿತಿಯಲ್ಲಿರುವ ಕಂಬವನ್ನು ಸ್ಥಳಾಂತರಿಸಿ ಅಪಾಯ ತಪ್ಪಿಸುವರೇ ಕಾದು ನೋಡಬೇಕಾಗಿದೆ.