ಮೇ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಯುವಕ ಸಾಗರ ಕ್ಷೇತ್ರದಿಂದ ಚುನಾವಣಾ ಕಣಕ್ಕೆ !

0 12

ರಿಪ್ಪನ್‌ಪೇಟೆ: ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುವ ಮುನ್ನವೇ ಚುನಾವಣೆಗೆ ಧುಮುಕಿರುವ ಹೊಸನಗರ ತಾಲ್ಲೂಕಿನ ಮುಂಬಾರು ಗ್ರಾಮ ಪಂಚಾಯ್ತಿಯ ಬೇಹಳ್ಳಿ ಗ್ರಾಮದ ಯುವಕ ಟಕ್ಕಿ ಅಬ್ಬಿ ಕಿರಣ ಸಾಗರ ವಿಧಾನಸಭಾ ಕ್ಷೇತ್ರದ ಕರ್ನಾಟಕ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೂಲಕ ಚುನಾವಣೆಗೆ ನಾಮಪತ್ರವನ್ನು ಸಲ್ಲಿಸುವುದರೊಂದಿಗೆ ಅಚ್ಚರಿ ಮೂಡಿಸಿದ್ದಾರೆ.


ವಿವಾಹಕ್ಕೆ 22 ದಿನಗಳಿದ್ದು ಚುನಾವಣೆಗೆ 20 ದಿನಗಳು ಬಾಕಿ ಉಳಿದಿದ್ದು ಈ ಜಂಜಾಟದಲ್ಲಿಯೂ ನವ ವರ ತನ್ನ ಜನಸೇವೆಗಾಗಿ ಹಗಲು-ರಾತ್ರಿಯನ್ನದೇ ಮತದಾರ ಪ್ರಭುಗಳ ಮನೆಗೆ ಭೇಟಿ ನೀಡಿ ಮತದಾರರ ಕೈ ಕಾಲು ಹಿಡಿಯವ ಸಾಹಸಕ್ಕೆ ಕೈಹಾಕಿದ್ದಾರೆ.


ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ಆದ್ಮಿ ಪಕ್ಷದಲ್ಲಿ ಅಬ್ಬರದ ಪ್ರಚಾರ ಮೆರವಣಿಗೆಗಳು ಸರತಿಸಾಲಿನಲ್ಲಿ ನಡೆಯುತ್ತಿದ್ದು ಏಕಾಏಕಿ ನಾಮಪತ್ರದ ಕೊನೆಯ ದಿನವಾದ ಗುರುವಾರ ಒಬ್ಬ ಇಂಜಿನಿಯರ್ ವಿಭಿನ್ನವಾಗಿ ಚುನಾವಣಾ ಕಣಕ್ಕೆ ಇಳಿಯುವ ಮೂಲಕ ಪ್ರಚಾರದಲ್ಲಿ ತೊಡಗಿರುವುದು ಮತದಾರರಲ್ಲಿ ಅಚ್ಚರಿ ಮೂಡಿಸಿದೆ.


ರವಿಕೃಷ್ಣರೆಡ್ಡಿ ನೇತೃತ್ವದ ಕೆ.ಆರ್.ಎಸ್.ಪ್ರಾದೇಶಿಕ ಪಕ್ಷದ ಅಭ್ಯರ್ಥಿಯಾಗಿರುವ ಅಬ್ಬಿ ಕಿರಣ ಇವರ ತಂದೆ ಕಾಂಗ್ರೆಸ್ ಪಕ್ಷದ ಮಾಜಿ ಯುವಕಾಂಗೈ ಅಧ್ಯಕ್ಷರಾಗಿ ಮತ್ತು ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿರುವ ಕ್ರಿಯಾಶೀಲ ವ್ಯಕ್ತಿತ್ವದ ಅಬ್ಬಿ ಈಶ್ವರಪ್ಪನವರ ಪುತ್ರರಾಗಿದ್ದು ಇವರು ಈ ಹಿಂದೆ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಎಂ.ಎಲ್.ಎ. ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿಯನ್ನು ಹಾಕಿದ್ದರೂ ಕೂಡಾ ಪಕ್ಷ ಟಿಕೆಟ್ ನೀಡದೆ ಇದ್ದರೂ ಮನಸ್ಸಿಗೆ ನೋವುಂಟು ಮಾಡಿಕೊಳ್ಳದೆ ಕಳೆದ 50 ವರ್ಷಗಳಿಂದಲೂ ಕಾಂಗ್ರೆಸ್ ತತ್ವ ಸಿದ್ದಾಂತದೊಂದಿಗೆ ಪಕ್ಷ ನಿಷ್ಟೆಯಿಂದ ಹಲವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಠೇವಣಿ ಹಣವನ್ನು ಸಂದಾಯ ಮಾಡುವ ಶ್ರೀಮಂತ ಸುಸಂಸ್ಕೃತ ಕುಟುಂಬದಲ್ಲಿ ಬೆಳದಂತಹ ಟಕ್ಕಿ ಅಬ್ಬಿ ಕಿರಣ ಇವರನ್ನು ಕಿರಣಗಳ ರವಿಕೃಷ್ಣರೆಡ್ಡಿ ನೇತೃತ್ವದ ಕೆ.ಆರ್.ಎಸ್ ಪಕ್ಷ ಟಿಕೆಟ್ ನೀಡುವುದರೊಂದಿಗೆ ಮಲೆನಾಡಿನ ಪ್ರಾಮಾಣಿಕ ಯುವಕನನ್ನು ಗುರುತಿಸಿರುವುದನ್ನು ಮತದಾರರು ಅಭಿನಂದಿಸಿದ್ದಾರೆ.


ಮಾಧ್ಯಮದವರೊಂದಿಗೆ ಕೆ.ಆರ್.ಎಸ್.ಪ್ರಾದೇಶಿಕ ಪಕ್ಷದ ಅಭ್ಯರ್ಥಿಯಾಗಿರುವ ಅಬ್ಬಿ ಕಿರಣ ಮಾತನಾಡಿ, ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಿ ಎಂದು ಜನರನ್ನು ತನ್ನತ್ತ ಸೆಳೆಯುತ್ತಿದ್ದು ಯಾವುದೇ ಆಡಂಬರವಿಲ್ಲದೇ ಸರಳ ರೀತಿಯಲ್ಲಿ ಮತ ಕೇಳುತ್ತಿದ್ದು ಇವರ ಈ ಹೋರಾಟಕ್ಕೆ ಪ್ರಜ್ಞಾವಂತ ನಾಗರೀಕರು ಬೆಂಬಲಿಸುತ್ತಿದ್ದು ಇಂತಹ ಸಜ್ಜನ ವಿದ್ಯಾವಂತರಿಗೆ ಜನಬೆಂಬಲಿಸಿದಲ್ಲಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮುಕ್ತ ಗ್ರಾಮ ರಾಜ್ಯವನ್ನು ಕಾಣಲು ಸಾಧ್ಯವಾಗುವುದೆಂಬ ಧ್ಯೇಯದೊಂದಿಗೆ ಮತದಾರರ ಮನ ಮುಟ್ಟುವತ್ತ ಮುಂದಾಗಿದ್ದು ಅಭ್ಯರ್ಥಿಯು ಮೇ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮತದಾನ ಮೇ 10 ನಡೆಯುತ್ತಿದೆ. ಈ ಮಧ್ಯದಲ್ಲಿಯೂ ಮತದಾರ ಪ್ರಭುಗಳನ್ನು ತಲುಪುತ್ತಿರುವುದಕ್ಕೆ ನಮ್ಮದೊಂದು ಸಲಾಮ್.

Leave A Reply

Your email address will not be published.

error: Content is protected !!