ರಿಪ್ಪನ್‌ಪೇಟೆ: ರಾಜ್ಯ ಯುವ ಕಾಂಗ್ರೆಸ್ ಘಟಕದ ವಕ್ತಾರರನ್ನಾಗಿ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಚ್. ಕುನ್ನೂರು ಗ್ರಾಮದ ವಿಕಾಸ್ ಕುನ್ನೂರು ಮಂಜಪ್ಪ ಇವರು ನೇಮಕಗೊಂಡಿದ್ದಾರೆ.
ಗ್ರಾಮೀಣ ಪ್ರದೇಶದ ಯುವಕ ಕ್ರಿಯಾಶೀಲ ಸಂಘಟನಾ ಚತುರ, ವಕೀಲ ವೃತ್ತಿಯ ಕಿರಿಯ ವ್ಯಕ್ತಿ ವಿಕಾಸ್ ಕುನ್ನೂರು ಮಂಜಪ್ಪನವರನ್ನು ರಾಜ್ಯ ಯುವ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಿರುವುದನ್ನು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಕಲಗೋಡು ರತ್ನಾಕರ್, ತಾಲ್ಲೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಬಿ.ಜಿ. ಚಂದ್ರಮೌಳಿಗೌಡ, ಕೋಡೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ವೈ.ಜಯಂತ್, ಮಾಜಿ ಉಪಾಧ್ಯಕ್ಷ ಸುಧಾಕರ, ಸದಸ್ಯರಾದ ಕಲಗೋಡು ಉಮೇಶ್, ಯಳಗಲ್ಲು ರಾಜು, ಪಿಸಿಎಸಿ ಉಪಾಧ್ಯಕ್ಷ ಸುಬ್ಬಣ್ಣ, ಕುಮಾರಸ್ವಾಮಿ, ಎಂ. ವೀರೇಂದ್ರ, ಗೌರಮ್ಮ, ಗಂಗಮ್ಮ, ಹರೀಶ, ಪರಮೇಶ್ ಅಭಿನಂದಿಸಿದ್ದಾರೆ.