ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ; ಆರಗ ಜ್ಞಾನೇಂದ್ರ

0 32

ರಿಪ್ಪನ್‌ಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾನೂನು ಸುವವಸ್ಥೆ ಸಂಪೂರ್ಣ ಹದಗಟ್ಟಿದ್ದು ಅಲ್ಲದೆ ಅಕ್ರಮ ಚಟುವಟಿಕೆ ನಡೆಸುವವರಲ್ಲಿ ಧೈರ್ಯ ಬಂದಿರುವುದು ಖಂಡನೀಯ ಎಂದು ಮಾಜಿ ಗೃಹ ಸಚಿವ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.


ರಿಪ್ಪನ್‌ಪೇಟೆಯ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ನೂತನ ಸರ್ಕಾರದ ಬಜೆಟ್ ಮಂಡನೆಯಲ್ಲಿ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಟೀಕೆಯನ್ನಾಗಿ ಬಿಂಬಿಸಲಾಗಿರುವ ಬಜೆಟ್ ಪುಸ್ತಕದಲ್ಲಿ ಬರೆದಿರುವುದು ಇತಿಹಾಸದಲ್ಲಿಯೇ ಇಲ್ಲ 14 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರು ರಾಜಕೀಯ ತೀಟೆಗಾಗಿ ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯವಾಗಿದೆ. ಕೇಂದ್ರ ಸರ್ಕಾರ ಕೊವಿಡ್ ಸಂದರ್ಭದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ನೀಡಿದ್ದು ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುತ್ತಿದ್ದಾರೆ ಆಗ ಮೋದಿಯವರನ್ನು ಕೇಳಿ ಗ್ಯಾರಂಟಿ ಕಾರ್ಡ್‌ಗೆ ಸಹಿ ಮಾಡಿದ್ದರ ಎಂದು ಹೇಳಿ ಕೇಂದ್ರ ಸರ್ಕಾರ ಇಂದಿಗೂ 5 ಕೆ.ಜಿ ಅಕ್ಕಿಯನ್ನು ನೀಡುತ್ತಿದ್ದು ಇವರು ಘೋಷಿಸಿದಂತೆ 10 ಕೆ.ಜಿ. ಅಕ್ಕಿಯನ್ನು ಪಡಿತರದಾರರಿಗೆ ವಿತರಿಸಲಿ ಎಂದರು.

ನಮ್ಮ ಸರ್ಕಾರ ಹಣ ಕೊಡುತ್ತೇವೆಂದು ಹೇಳಿದಾಗ ಹಣ ತಿನ್ನಲು ಬರುತ್ತದ ಎಂದು ಹೇಳಿರುವ ಸಿದ್ದರಾಮಯ್ಯ ಈಗ ಪಡಿತರದಾರರಿಗೆ ಅಕ್ಕಿ ಬದಲು 174 ರೂ. ಹಣ ಕೊಡುತ್ತೇವೆ ಎಂದಿದ್ದಾರೆ ಆ ಹಣ ತಿನ್ನಲು ಬರುತ್ತದಾ ಎಂದು ಕುಟುಕಿದ ಅವರು, ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಅಕ್ಕಿ ಬೆಲೆ 50 ರಿಂದ 60 ರೂ. ಗಳಾಗಿದ್ದು ಇವರು ಕೊಡುವ 174 ರೂ.ಗಳಿಗೆ ಎರಡೂವರೆ ಕೆ.ಜಿ.ಅಕ್ಕಿ ಬರದು ಎಂದರು. ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಿಗಾಗುವಷ್ಟು ಅಕ್ಕಿ ದಾಸ್ತಾನು ಮಾಡಿಕೊಂಡಿದ್ದು ಆದು ಅತಿವೃಷ್ಠಿ ಅನಾವೃಷ್ಠಿ ಯದ್ದ ಸಂದರ್ಭದಲ್ಲಿ ಹಾಗೂ ಭೂಕಂಪದಂತಹ ಅವಘಡಗಳು ಸಂಭವಿಸಿದಾಗ ತುರ್ತು ಪರಿಹಾರಕ್ಕಾಗಿ ಮುಂಜಾಗ್ರತಾ ಕ್ರಮವಾಗಿ ಆಹಾರ ದಾನ್ಯ ಸಂಗ್ರಹಿಸಿಕೊಳ್ಳಲಾಗಿದೆ ಅದನ್ನು ಈ ರೀತಿಯಲ್ಲಿ ಗ್ಯಾರಂಟಿ ಯೋಜನೆಗಾಗಿ ಒಂದೊಂದು ರಾಜ್ಯ ಕೇಳಿದಾಕ್ಷಣ ಕೊಡಲು ಸಾಧ್ಯವೇ ಎಂದರು.


ಚುನಾವಣೆಯ ಸಂದರ್ಭದಲ್ಲಿ ಗ್ಯಾರಂಟಿ ಕಾರ್ಡ್ ಯಾವುದೇ ಷರತ್ತುಗಳಿಲ್ಲದೇ ಅನುಷ್ಟಾನಗೊಳಿಸುವ ಭರವಸೆ ನೀಡಿ ಈಗ ಷರತ್ತು ವಿಧಿಸುತ್ತಿದೆ ಅಲ್ಲದೇ ವಿದ್ಯಾವಂತ ನಿರುದ್ಯೋಗಿಗಳಿಗೆ ಭತ್ಯೆ ನೀಡುವುದಾಗಿ ಹೇಳಿದ ಸರ್ಕಾರ ಈಗ 2023 ನೇ ಸಾಲಿನಲ್ಲಿ ಉತ್ತೀರ್ಣಾರಾಗಿರುವ ನಿರುದ್ಯೋಗಿಗಳಿಗೆ ಎನ್ನುತ್ತಿದ್ದಾರೆ. ಕೆಲವು ಜಿಲ್ಲೆಯಲ್ಲಿನ ಮಹಿಳೆಯರಿಗೆ ಫ್ರೀ ಬಸ್ ವ್ಯವಸ್ಥೆ ಇಲ್ಲದೆ ವಂಚಿತರಾಗಿದ್ದು ಸರ್ಕಾರ ಶಕ್ತಿ ಯೋಜನೆಯಡಿ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆರಿಗೂ ಫ್ರೀ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಿ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಏಕೆ ಈ ತಾರತಮ್ಯ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಜೈನ ಮುನಿಗಳ ಹತ್ಯೆಗೆ ಖಂಡನೆ:

ಬೆಳಗಾವಿ ಚಿಕ್ಕೊಡಿಯ ಜೈನ ಮುನಿಗಳ ಅಮಾನುಷ ರೀತಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರವಾಗಿ ಖಂಡಿಸಿದರು.
ಜಗತ್ತಿನಲ್ಲಿ ಶಾಂತಿಯಿಂದಿರುವ ಜೈನಧರ್ಮದ ಮುನಿಗಳನ್ನು ನಾವು ಸ್ವಂತಹ ದೇವರು ಎಂದು ಪೂಜನೀಯವಾಗಿ ಕಂಡವರು ಅಂತಹವರನ್ನು ಬರ್ಬರವಾಗಿ ಹತ್ಯೆ ಮಾಡಿರುವು ಖಂಡನೀಯವೆಂದರು.


ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕಗ್ಗಲಿ ಲಿಂಗಪ್ಪ, ಎಂ.ಬಿ.ಮಂಜುನಾಥ, ಸುಧೀಂದ್ರ ಪೂಜಾರಿ, ಮೆಣಸೆ ಆನಂದ, ಅರಸಾಳು ಗ್ರಾ.ಪಂ. ಅಧ್ಯಕ್ಷ ಉಮೇಶ ಕಡೇಗದ್ದೆ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!