ರಿಪ್ಪನ್‌ಪೇಟೆ: ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಪ್ರಬಲ ಕೋಮಿನ ವೀರಶೈವ ಸಮಾಜವನ್ನು ಅವಹೇಳನಗೊಳಿಸುವ ಮೂಲಕ ಜನಾಂಗದವರಲ್ಲಿ ಸಂಘರ್ಷ ಹುಟ್ಟುಹಾಕಿ ಚೆಂದ ನೋಡುತ್ತಿದ್ದಾರೆ ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಘೋರ ಪರಿಣಾಮ ಎದುಸಬೇಕಾಗುತ್ತದೆಂದು ತಾಲ್ಲೂಕು ರೈತ ಸಂಘದ ರೈತ ಮುಖಂಡ ಕುಕ್ಕಳಲೇ ಈಶ್ವರಪ್ಪಗೌಡ ಎಚ್ಚರಿಕೆ ನೀಡಿದ್ದಾರೆ.
ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ವೀರಶೈವ ಸಮಾಜ ದೇಶದಲ್ಲಿ ಪ್ರಬಲವಾಗಿದ್ದು ಇತ್ತೀಚಿನ ದಿನಮಾನಗಳಲ್ಲಿ ಈ ಸಮಾಜವನ್ನು ಒಡೆಯುವ ಪ್ರಯತ್ನದಲ್ಲಿ ರಾಷ್ಟ್ರೀಯ ಪಕ್ಷಗಳು ಆಟಿಕೆಯ ವಸ್ತುವನ್ನಾಗಿಸಿಕೊಂಡು ನಿತ್ಯ ಸಮಾಜದವರ ಬಗ್ಗೆ ಆವಹೇಳನಕಾರಿ ಹೇಳಿಕೆಯನ್ನು ನೀಡುತ್ತಿರುವುದು ಸಮಾಜಕ್ಕೆ ದ್ರೋಹ ಎಸಗಿದಂತಾಗಿದ್ದು ಈ ಬಗ್ಗೆ ವೀರಶೈವ ಪಂಚಪೀಠಗಳು ಮತ್ತು ವೀರಕ್ತ ಮಠಗಳ ಮಠಾಧೀಶರು ಸಂಘಟನ್ಮಾತಕ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಸಮಾಜವನ್ನು ಸಂಘಟಿಸಿ ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ದ ತಕ್ಕ ಪಾಠ ಕಲಿಸಲು ಇದೊಂದು ಸೂಕ್ತ ಸಮಯವಾಗಿದೆ ಎಂದು ಹೇಳಿದರು.