ರಿಪ್ಪನ್‌ಪೇಟೆಯಲ್ಲಿ ಏ. 8 ರಿಂದ ‘ಹಳ್ಳಿ ಮಕ್ಕಳ ರಂಗಹಬ್ಬ’ ಮಕ್ಕಳ ಬೇಸಿಗೆ ಶಿಬಿರ ; ಮೊದಲು ಬಂದವರಿಗೆ ಆದ್ಯತೆ

0 23

ರಿಪ್ಪನ್‌ಪೇಟೆ: ಇಲ್ಲಿನ ದಿ.ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಟಾನ ಮಸರೂರು ಮತ್ತು ಮಲೆನಾಡು ಕಲಾ ತಂಡ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಾಲ್ಕನೇ ವರ್ಷದ “ಹಳ್ಳಿ ಮಕ್ಕಳ ರಂಗಹಬ್ಬ‘’ ಮಕ್ಕಳ ಬೇಸಿಗೆ ಶಿಬಿರವನ್ನು ಏಪ್ರಿಲ್ 8 ರಿಂದ 15 ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಆಕಾಶವಾಣಿ ಕಲಾವಿದ ರಂಗ ಶಿಕ್ಷಕ ಡಾ.ಗಣೇಶ ಕೆಂಚನಾಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

6 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಈ ಶಿಬಿರವನ್ನು ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದು ಈ ಶಿಬಿರದಲ್ಲಿ ನಾಟಕ, ನೃತ್ಯ ಚಿತ್ರಕಲೆ, ಜಾನಪದ ಗೀತಗಾಯನ ವೇದಿಕೆ ನಿರ್ವಹನೆ ಸಾಹಿತ್ಯ ಪರಿಚಯ ರಂಗಗೀತೆ ಕರಕುಶಲ ಕಲೆ ಕಥೆ ಕವನ ಯೋಗ ಗ್ರಾಮೀಣ ಕಲೆ ಸಾಮಾಜಿಕ ಕಳಕಳಿ ಸೇರಿದಂತೆ ಇನ್ನೂ ವಿಸ್ಮಯಕಾರಿ ಕಲಿಕಾ ಶಿಬಿರವನ್ನು ಆಯೋಜಿಸಲಾಗಿದ್ದು ಮಕ್ಕಳ ಕಿರುಚಿತ್ರ ಪ್ರದರ್ಶನ ಮತ್ತು ತರಬೇತಿ ಜೊತೆಗೆ ಶಿಬಿರ ಕೊನೆಯ ದಿನ ಮಕ್ಕಳಿದ 2 ನಾಟಕ ಪ್ರದರ್ಶನ ಮಾಡಿಸಲಾಗುವುದು.

ಈ ಶಿಬಿರಕ್ಕೆ ರಂಗಭೂಮಿ ಕಿರುತೆರೆ ನೀನಾಸಂ ಪದವೀಧರರು, ಅನುಭವಿ ನಿರ್ದೇಶಕರುಗಳು ಆಗಮಿಸಿ ಸೂಕ್ತ ತರಬೇತಿ ನೀಡುವರು. ಕೇವಲ 40 ಜನರಿಗೆ ಅವಕಾಶವಿದ್ದು ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಶಿಬಿರದ ಶುಲ್ಕ 1100 ರೂ. ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಮೊ.ನಂ 9902358019, 94807245592, 9886973045,
9449951748 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!