ರಿಪ್ಪನ್‌ಪೇಟೆಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಆಚರಣೆ

0 0


ರಿಪ್ಪನ್‌ಪೇಟೆ: ಮಾಯೆಯ ಭವಸಾಗರದಿಂದ ಶಿಷ್ಯನನ್ನು ಮತ್ತು ಭಕ್ತನನ್ನು ಸುಲಭವಾಗಿ ದಾಟಿಸುವವರು ಅವರಿಂದ ಅವಶ್ಯಕವಾದ ಸಾಧನೆ ಮಾಡಿಸಿಕೊಳ್ಳುವವರು ಮತ್ತು ಕಠಿಣ ಸಮಯದಲ್ಲಿ ಅವರಿಗೆ ನಿರಪೇಕ್ಷ ಪ್ರೀತಿಯಿಂದ ಆಧಾರ ನೀಡಿ ಸಂಕಷ್ಟದಿಂದ ಪಾರು ಮಾಡುವವರು ಗುರುಗಳೇ ಆಗಿರುತ್ತಾರೆ. ಅಂತಹ ಪರಮಪೂಜನೀಯ ಗುರುಗಳ ಕುರಿತು ಕೃತಜ್ಞತೆ ವ್ಯಕ್ತಪಡಿಸುವ ದಿನ ಅಂದರೆ ಗುರು ಪೂರ್ಣಿಮೆಯಾಗಿದೆ ಎಂದು ಶಿವಮೊಗ್ಗ ವಿಭಾಗ ವ್ಯವಸ್ಥಾಪಕ ಪ್ರಮುಖ್ ಭೌದ್ದಿಕ್ ಲೋಹಿತಾಶ್ವ ಕೇದಿಗ್ಗೆರೆ ಹೇಳಿದರು.


ರಿಪ್ಪನ್‌ಪೇಟೆಯ ಬಿ.ಎಸ್.ಎನ್.ಎಲ್.ಕಛೇರಿ ಪಕ್ಕದ ಶ್ರೀರಾಮ ಮಂದಿರ ಸಭಾಭವನದಲ್ಲಿ ವಿನಾಯಕಪೇಟೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದರು ಆಯೋಜಿಸಲಾದ “ಗುರುಪೂಜಾ ಉತ್ಸವ’’ಕಾರ್ಯಕ್ರಮದಲ್ಲಿ ಬೌದ್ದಿಕ್ ನೆರವೇರಿಸಿ ಕೃತಜ್ಞತೆಯ ಅರಿವಿನಿಂದ ನನ್ನಲ್ಲಿರುವ ಕರ್ತೃತ್ವ ನಕಾರಾತ್ಮಕ ವಿಚಾರಗಳು ಭಾವನೆಗಳೂಂದಿಗೆ ರಾಷ್ಟ್ರ ಭಕ್ತಿ ಹಿಂದು ಧ್ವಜಕ್ಕೆ ಸಲ್ಲಿಸುವ ಸಮರ್ಪಣಾ ಭಾವನೆ ನಮ್ಮನ್ನು ಬಲಿಷ್ಟಗೊಳಿಸುವ ಕೃತಜ್ಞತಾಭಾವ ಎಂದರು.


ಗುರುಪೂಜಾ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸುಧೀಂದ್ರ ಹೆಬ್ಬಾರ್ ವಹಿಸಿ ಮಾತನಾಡಿ, ಆರ್.ಎನ್.ಎಸ್.ನಲ್ಲಿ ಶಿಸ್ತು ಸಹನೆ ಬೆಳೆಸುವ ಮೂಲಕ ಮನುಷ್ಯರಲ್ಲಿ ಶಾಂತಿ ಸಹನೆ ರಾಷ್ಟ್ರಾಭಿಮಾನ ಧರ್ಮಭಿಮಾನ ಆಧ್ಯಾತ್ಮದ ಅರಿವು ಮೂಡಿಸಲು ಸಹಕಾರಿಯಾಗಿದೆ ಎಂದರು.


ಈ ಸಂದರ್ಭದಲ್ಲಿ ವಿನಾಯಕ ನಗರದ ಆರ್.ಎಸ್.ಎಸ್.ಸಂಘದವರು ಹಾಗೂ ಇನ್ನಿತರ ಅಭಮಾನಿಬಳಗ ಪಾಲ್ಗೊಂಡಿದ್ದರು.

ನಿಧನ ವಾರ್ತೆ :

ರಿಪ್ಪನ್‌ಪೇಟೆ: ಇಲ್ಲಿನ ಮದೀನಾ ಕಾಲೋನಿ ನಿವಾಸಿ ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ಚಾಲಕ ಅಬ್ದುಲ್‌ಖಾದರ್ ಹೃದಯಾಘಾತದಿಂದ ಭಾನುವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರ, ಪುತ್ರಿಯರು ಇದ್ದಾರೆ.

Leave A Reply

Your email address will not be published.

error: Content is protected !!