ರಿಪ್ಪನ್‌ಪೇಟೆಯಲ್ಲಿ ನಟ ಶಿವರಾಜ್‌ಕುಮಾರ್ ಬೇಳೂರು ಪರ ಪ್ರಚಾರ ; ಮಾವ ಬಂಗಾರಪ್ಪಾಜಿ ಶಕ್ತಿ ತುಂಬಲು ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಲು ಮತದಾರರಲ್ಲಿ ಮನವಿ

0 152

ರಿಪ್ಪನ್‌ಪೇಟೆ: ನಮ್ಮ ನಮ್ಮ ವರ್ಣರಂಜಿತ ನಾಯಕ ಹುಟ್ಟು ಹೋರಾಟಗಾರ ರೈತ ಪರ ನಾಯಕ ದಿ.ಎಸ್.ಬಂಗಾರಪ್ಪಾಜಿಯವರ ಅಭಿಮಾನಿಗಳಿರುವ ಈ ಕ್ಷೇತ್ರದಲ್ಲಿ ಅವರೇ ಬೆಳೆಸಿದ ಗೋಪಾಲಕೃಷ್ಣ ಬೇಳೂರು ಇವರನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತಗಳಿಂದ ಜಯಗಳಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಂತೆ ಅಭಿಮಾನಿಗಳು ಜಯಘೋಷ ಮುಗಿಲು ಮುಟ್ಟುವಂತಾಗಿತ್ತು. ಶಿವಣ್ಣ ಹಾಡು ಹೇಳಿ ಎಂದು ಹಲವರು ಕೂಗುತ್ತಿದ್ದಂತೆ ಜೋಗಿ ಚಿತ್ರದ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಮತ್ತು ಪುನೀತ್ ರಾಜ್‍ಕುಮಾರ್ ರವರ ‘ಬಾನ ದಾರಿಯಲ್ಲಿ’ ಹಾಡನ್ನು ಹಾಡಿ ಮತದಾರರನ್ನು ಶಿವಣ್ಣ ಮನರಂಜಿಸಿದರು.

ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಸೊರಬ ಸಾಗರ ಮತ್ತು ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಮತದಾರರು ನಮ್ಮ ತಂದೆಯವರ ಅಭಿಮಾನಿಗಳ ತವರೂರು ಆ ಕಾರಣದಿಂದಾಗಿ ಮತದಾರರು ಈ ಬಾರಿಯ ಚುನಾವಣೆಯಲ್ಲಿ ನಮ್ಮಗಳ ಕೈ ಬಿಡುವುದಿಲ್ಲ ಎಂಬ ನಂಬಿಕೆ ನಮಗಿದೆ. ಈ ಬಾರಿ ಗೆಲುವು ನಮ್ಮದೇ ಎಂಬುದಕ್ಕೆ ಇಲ್ಲಿ ಸೇರಿರುವ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ ಎನ್ನುವುದರೊಂದಿಗೆ ಪರೋಕ್ಷವಾಗಿ ಬಿಜೆಪಿಗೆ ಈ ಜನಸ್ತೋಮವನ್ನು ಕಂಡು ಭಯಹುಟ್ಟುವಂತೆ ಮಾಡಿದೆ ಎಂದರು.

ಗವಟೂರು ಬಸ್ ನಿಲ್ದಾಣದಿಂದ ಸಾವಿರಾರು ಸಂಖ್ಯೆಯಲ್ಲಿ ಬೈಕ್ ರ‍್ಯಾಲಿಯ ಮೆರವಣಿಗೆ ಆರಂಭಗೊಂಡು ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯ ಮೆಸ್ಕಾಂ ಕಛೇರಿಯ ಬಳಿ ಕೊನೆಗೊಂಡಿತು.

ಈ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್, ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, ಜಿ.ಪಂ.ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್, ಬಂಡಿ ರಾಮಚಂದ್ರ, ಶ್ವೇತಾ, ಬಿ.ಜಿ ನಾಗರಾಜ್, ಜಯಶೀಲಪ್ಪಗೌಡ, ಹಕ್ರೆ ಮಲ್ಲಿಕಾರ್ಜುನ, ಅಮ್ಮಿರ್‌ಹಂಜಾ, ಹೆಚ್.ವಿ.ಈಶ್ವರಪ್ಪಗೌಡ, ಎಂ.ಎಂ ಪರಮೇಶ್, ಎರಗಿ ಉಮೇಶ್, ಉಬೇದುಲ್ಲಷರೀಪ್, ಆಸೀಪ್‌ಭಾಷಾಸಾಬ್, ಜಿ.ಆರ್.ಗೋಪಾಲಕೃಷ್ಣ, ಮಳವಳ್ಳಿ ಮಂಜುನಾಥ, ಸಣ್ಣಕ್ಕಿ ಮಂಜ ಇನ್ನಿತರರು ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

Leave A Reply

Your email address will not be published.

error: Content is protected !!