ರಿಪ್ಪನ್‌ಪೇಟೆಯಲ್ಲಿ ನಾಳೆ ‘ಪ್ರಜಾವಾಣಿ’ ಅಮೃತ ಮಹೋತ್ಸವ ಕಾರ್ಯಕ್ರಮ

0 39

ರಿಪ್ಪನ್‌ಪೇಟೆ : ಪಟ್ಟಣದ ಪ್ರಜಾವಾಣಿ ಬಳಗದ ಓದುಗರ ವೇದಿಕೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಜಾವಾಣಿಯ ಅಮೃತ ಮಹೋತ್ಸವ ಕಾರ್ಯಕ್ರಮ ಫೆಬ್ರವರಿ 23 ಗುರುವಾರ ಬೆಳಗ್ಗೆ 11ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜರುಗಲಿದೆ.

ಡಾ. ಬಿ ಸಿ ರಾಯ್ ಪ್ರಶಸ್ತಿ ಪುರಸ್ಕೃತ ಶಿವಮೊಗ್ಗದ ಡಾ. ಕೃಷ್ಣ ಎಸ್. ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ಗುರಿ ತಲುಪುವುದು ಹೇಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಾಜು ಆರ್.ಕೆ. ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪ್ರಜಾವಾಣಿ ದಿನಪತ್ರಿಕೆಯ ದಾವಣಗೆರೆ ಬ್ಯೂರೋ ಮುಖ್ಯಸ್ಥರಾದ ಸಿದ್ದಯ್ಯ ಹಿರೇಮಠ, ಪ್ರಜಾವಾಣಿ ಜಿಲ್ಲಾ ವರದಿಗಾರ ಜಿ.ಎಚ್. ವೆಂಕಟೇಶ್, ಪ್ರಜಾವಾಣಿ ಪ್ರಸರಣಾಂಗ ವಿಭಾಗದ ಮುಖ್ಯಸ್ಥ ಪ್ರಕಾಶ್ ನಾಯಕ್ ದಾವಣಗೆರೆ ಭಾಗವಹಿಸಲಿದ್ದಾರೆ.
ಡಾ. ರತ್ನಾಕರ್ ಸಿ. ಕುನಗೋಡು ಮುಖ್ಯಸ್ಥರು ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನ್‌ಪೇಟೆ, ಶಿವಮೊಗ್ಗ ಜಿಲ್ಲಾ ಪ್ರಜಾವಾಣಿ ಜಾಹೀರಾತು ವಿಭಾಗದ ಪ್ರತಿನಿಧಿ ಚೇತನ್ ಕುಮಾರ್ ಜಿ. ಉಪಸ್ಥಿತರಿರುವರು.


ಇದೇ ಸಂದರ್ಭದಲ್ಲಿ ಬಿ.ಟಿ. ರವೀಂದ್ರ ಕೃಷಿಕರು, ಹುಲಿಗಿನ ಮನೆ, ಚಂದ್ರಶೇಖರ್ (ಮಂಜಣ್ಣ) ಸಮಾಜಮುಖಿ ಚಿಂತಕರು ರಿಪ್ಪನ್‌ಪೇಟೆ, ದುಗ್ಗಪ್ಪ ಜಿ. ಶಿಕ್ಷಣ ಸಂಯೋಜಕರು ಹೊಸನಗರ, ಎಂ.ಲೋಕೇಶ್ ಪ್ರಜಾವಾಣಿ ಪತ್ರಿಕೆ ವಿತರಕರು ರಿಪ್ಪನ್‌ಪೇಟೆ ಇವರನ್ನು ಸನ್ಮಾನಿಸಲಾಗುವುದು ಎಂದು ಪ್ರಜಾವಾಣಿ ಬಳಗದ ಓದುಗರ ವೇದಿಕೆ ರಿ.ರಾ. ರವಿಶಂಕರ್ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!