ರಿಪ್ಪನ್‌ಪೇಟೆ : ಎರಡು ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.
ರಿಪ್ಪನ್‌ಪೇಟೆ-ಹೊಸನಗರ ಮಾರ್ಗವಾಗಿ ಶಿವಮೊಗ್ಗದಿಂದ ಹೊಸನಗರ ನಗರ ಕಡೆಗೆ ಬರುತ್ತಿದ ಸಂದರ್ಭದಲ್ಲಿ ಶಾಂತಪುರ ಬಳಿ ಮುಂದೆ ಬರುತಿದ್ದ ಲಾರಿಯ ಹೆಡ್ ಲೈಟ್ ಕಣ್ಣಿಗೆ ಹೊಡೆದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆ ಪಕ್ಕಕ್ಕೆ ಬಿದ್ದ ಪರಿಣಾಮ ಬೈಕ್ ಸವಾರ ತಲೆಗೆ ತೀವ್ರ ತರನಾದ ಪೆಟ್ಟು ಬಿದಿದ್ದು ತೀವ್ರ ರಕ್ತಸ್ರಾವವಾಗಿದೆ.
ಬೈಕ್ ಸವಾರ ಮೋಹನ್ (22) ವಾರಂಬಳ್ಳಿ ಯುವಕ ಎಂದು ತಿಳಿದು ಬಂದಿದೆ. ಯುವಕ ಬೈಕ್ ಓಡಿಸುವ ಸಮಯ ಹೆಲ್ಮೆಟ್ ಹಾಕದೆ ಇರುವುದು ತಲೆಗೆ ಅಧಿಕ ಹೊಡೆತ ಬಿದಿದ್ದೆ ಎಂದು ತಿಳಿದು ಬಂದಿದ್ದು ತಕ್ಷಣ 108 ಆಂಬುಲೆನ್ಸ್ ನಲ್ಲಿ ಪ್ರಾಥಮಿಕ ಚಿಕೆತ್ಸೆ ನೀಡಿ ಹೆಚ್ಜಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ಘಟನೆ ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನೊಂದು ಅಪಘಾತ ಪ್ರಕರಣ ನಡೆದಿದ್ದು ಪಟ್ಟಣದ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ಲಗೇಜ್ ಆಟೋ (KA-15 A 4679) ಹಾಗೂ ಹೀರೋ ಹೋಂಡಾ ಸ್ಪೈಂಡರ್ (KA 01 S 8450) ಬೈಕುಗಳ ನಡುವೆ ಡಿಕ್ಕಿಯಾಗಿದೆ.
ಈ ಅಪಘಾತದಲ್ಲಿ ಬೈಕ್ ಸವಾರ ಗವಟೂರು ನಿವಾಸಿ ಗಣೇಶ್ (46) ರವರಿಗೆ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತ ಸ್ರಾವವಾಗಿದೆ. ಅಪಘಾತ ನಡೆದು ಅರ್ಧ ಗಂಟೆ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ದಾರಿಹೋಕರು ಸಹಾಯಕ್ಕೆ ಬರಲಿಲ್ಲ.
ಸುದ್ದಿ ತಿಳಿದ ಸ್ಥಳೀಯ ಯುವಕರು ಸ್ಥಳಕ್ಕೆ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನಿಸಲು 108 ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.