ರಿಪ್ಪನ್‌ಪೇಟೆ ಠಾಣೆಯ ನೂತನ ಪಿಎಸ್‌ಐ ಆಗಿ ಎಸ್. ಪ್ರವೀಣ್ ಅಧಿಕಾರ ಸ್ವೀಕಾರ

0 0

ರಿಪ್ಪನ್‌ಪೇಟೆ: ದಾವಣಗೆರೆ ಜಿಲ್ಲೆಯ ನ್ಯಾಮತಿ ಠಾಣೆಯಿಂದ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದ ಪಿಎಸ್‌ಐ ಪ್ರವೀಣ್ ಎಸ್ ಇಂದು ಅಧಿಕಾರ ಸ್ವೀಕಾರ ಮಾಡಿದರು.

ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾನಂದ ಕೋಳಿ ಹೊಸನಗರ ಠಾಣೆಗೆ ವರ್ಗಾವಣೆಗೊಂಡಿದ್ದು ಆ ಸ್ಥಳಕ್ಕೆ ದಾವಣೆಗೆರೆ ಜಿಲ್ಲೆಯ ನ್ಯಾಮತಿ ಪೊಲೀಸ್‌ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್ ವರ್ಗಾವಣೆಗೊಂಡಿದ್ದರು.

ಅಧಿಕಾರ ಸ್ವೀಕಾರದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಈ ಹಿಂದಿನ ಪಿಎಸ್‌ಐ ಶಿವಾನಂದ ಕೋಳಿಯವರು ಟ್ರಾಫಿಕ್ ಕಿರಿಕಿರಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿಯಲ್ಲಿಯೆ ನಾನು ಮುಂದುವರಿಸುವುದಾಗಿ ತಿಳಿಸಿ, ಬೈಕಿನಲ್ಲಿ ತ್ರಿಬಲ್ ರೈಡ್ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ಶಾಲಾ ಕಾಲೇಜ್ ಪ್ರಾರಂಭದ ಮತ್ತು ಬಿಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳಗ್ಗೆ ಮತ್ತು ಸಂಜೆ ನಮ್ಮ ಸಿಬ್ಬಂದಿವರ್ಗವನ್ನು ವಾಚ್ ಮಾಡಲು ನಿಯೋಜನೆ ಮಾಡುವ ಬಗ್ಗೆ ವಿಶೇಷ ಆಸಕ್ತಿ ವಹಿಸುವುದಾಗಿ ವಿವರಿಸಿ, ಶಾಲಾ ಕಾಲೇಜ್ ಹತ್ತಿರ ಗಾಂಜಾ ಇನ್ನಿತರ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

Leave A Reply

Your email address will not be published.

error: Content is protected !!