ರಿಪ್ಪನ್‌ಪೇಟೆ ; ಬಹುತೇಕ ಶಾಂತಿಯುತ ಮತದಾನ

0 56

ರಿಪ್ಪನ್‌ಪೇಟೆ: ಇಂದು ನಡೆದ ಸಾಗರ ಮತ್ತು ತೀರ್ಥಹಳ್ಳಿ ಕ್ಷೇತ್ರದ ವಿಧಾನಸಭಾ ಚುನಾವಣೆಯ ಮತದಾನ ಬಹುತೇಕ ಶಾಂತಿಯುತವಾಗಿ ನಡೆದು ಮುಕ್ತಾಯವಾಯಿತು.

ಸುಡುವ ಬಿಸಿಲಿನ ಮಧ್ಯೆ ಮತದಾರರು ಬೆಳಿಗ್ಗೆಯಿಂದ ಸಂಜೆಯವರೆಗೆ ಹುರುಪು, ಹುಮ್ಮಸ್ಸಿನಿಂದ ಮತಗಟ್ಟೆಗಳಿಗೆ ಬಂದು ಆಸಕ್ತಿಯಿಂದ ಮತ ಚಲಾಯಿಸಿದರು.

ಸಂಜೆ ಹೊತ್ತು ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ಕಂಡು ಬಂದಿತು. ರಿಪ್ಪನ್‌ಪೇಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ 6 ಗಂಟೆ ನಂತರ ಬಿರುಗಾಳಿ ಸಹಿತ ಗುಡುಗು, ಸಿಡಿಲಬ್ಬರದ ಮಳೆ ಸುರಿಯಿತು. ವಿದ್ಯುತ್ ಸಹ ಕೈ ಕೊಟ್ಟಿತು. ಆದರೆ ಮತದಾನಕ್ಕೆ ಯಾವುದೇ ಅಡ್ಡಿಯಾಗಿಲ್ಲ.

ನೊಣಬೂರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲಾ ಮತಗಟ್ಟೆಯಲ್ಲಿ ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಮತ ಚಲಾಯಿಸಿದರು.

ಮಹಿಳೆಯರದ್ದೆ ಕಾರುಬಾರು

ಚುನಾವಣಾ ಆಯೋಗದವರು ವಿಶೇಷವಾಗಿ ಮಹಿಳೆಯರಿಗಾಗಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸುವುದರೊಂದಿಗೆ ಶೇ. 100% ಸಂಪೂರ್ಣ ಮತದಾನ ಮಾಡುವುದರೊಂದಿಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಖಿ ಮತ ಕೇಂದ್ರವನ್ನು ಹೊಸನಗರ ತಾಲ್ಲೂಕಿನ ಅಮೃತ (ಗರ್ತಿಕೆರೆ) ಗ್ರಾಮದಲ್ಲಿ ಇಂದು ನಡೆದ ಮತದಾನ ಸಂದರ್ಭದಲ್ಲಿ ಆರಂಭಿಸಿ ಮಹಿಳಾ ಮತದಾರರಲ್ಲಿ ಹೆಚ್ಚು ಮತದಾನ ಮಾಡುವಂತೆ ಪ್ರೇರಣೆ ನೀಡಿರುವುದು ವಿಶೇಷವಾಗಿತ್ತು.

ಈ ಮತ ಕೇಂದ್ರದಲ್ಲಿ ಸಾಲುಮರದ ತಿಮ್ಮಕ್ಕ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಆನಂದಿಬಾಯಿ ಜೋಷಿ, ಸಾವಿತ್ರಿ ಬಾಯಿ ಪುಲೆ, ಕಿತ್ತೂರು ರಾಣಿ ಚೆನ್ನಮ್ಮ ಹೀಗೆ ಮಹಿಳೆಯರ ಚಿತ್ರಗಳ ಫ್ಲೆಕ್ಸ್ ಅಳವಡಿಸಿ ಹೆಚ್ಚು ಮತದಾನ ಮಾಡುವ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸವ ನಿಟ್ಟಿನಲ್ಲಿ ಸಖಿ ಪಿಂಕ್ ಬೂತ್ ಕಾರ್ಯದಲ್ಲಿ ಹೆಚ್ಚು ಆಕರ್ಷಿಸುವಂತಾಯಿತು.

ಅಮೃತ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಖಿ ಮತದಾನ ಕೇಂದ್ರದಲ್ಲಿ ಮಹಿಳಾ ಮತದಾರರು ಸರತಿ ಸಾಲಿನಲ್ಲಿ ಮತದಾನಕ್ಕೆ ನಿಂತಿರುವುದು.

660 ಕ್ಕೂ ಹೆಚ್ಚು ಮಹಿಳೆಯರು ಮತ್ತು 560 ಕ್ಕೂ ಹೆಚ್ಚಿನ ಪುರುಷ ಮತದಾರರಿರುವ ಈ ಮತ ಕೇಂದ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಲೆನಾಡ ಕೋಗಿಲೆ ಖ್ಯಾತಿಯ ಹೊ.ನಾ.ರಾಘವೇಂದ್ರ ಮತ್ತು ಅಂಗವಿಕಲರು ವೃದ್ದರು ವಿಲ್ ಚೇರ್ ಮೂಲಕ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.


ಈ ಸಂದರ್ಭದಲ್ಲಿ ತಾಲ್ಲೂಕ್ ಪಂಚಾಯ್ತಿ ಪ್ರಭಾರಿ ಇಓ ನರೇಂದ್ರ, ಗ್ರಾಮ ಪಂಚಾಯ್ತಿ ಪಿಡಿಓ ಸುಧಾ,
ಗ್ರಾಮೀಣ ವಿಕಲಚೇತನ ಕಾರ್ಯಕರ್ತೆ ಸಾವಿತ್ರಿ, ಇಓ ಕಛೇರಿಯ ಸಿಬ್ಬಂದಿ ಹರ್ಷ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!